ಬೈಲಹೊಂಗಲ

ಅಧ್ಯಕ್ಷೆಯಾಗಿ ಗಿರಿಜಾ, ಉಪಾಧ್ಯಕ್ಷರಾಗಿ ಬಸನಗೌಡಾ ಆಯ್ಕೆ

ಅಧ್ಯಕ್ಷೆಯಾಗಿ ಗಿರಿಜಾ, ಉಪಾಧ್ಯಕ್ಷರಾಗಿ ಬಸನಗೌಡಾ ಆಯ್ಕೆ

ಬೈಲಹೊಂಗಲ: ಬೈಲವಾಡ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಗಿರಿಜಾ ಬಸಪ್ಪ ಮೋದಗಿ, ಉಪಾಧ್ಯಕ್ಷರಾಗಿ ಬಸನಗೌಡಾ ಮಡ್ಡೆಪ್ಪಗೌಡಾ ಪಾಟೀಲ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಗಿರಿಜಾ ಮೋದಗಿ, ಜೈತುನಬಿ  ದೇವಲಾಪೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಸನಗೌಡಾ  ಪಾಟೀಲ, ಚಂದ್ರಗೌಡಾ  ಪಾಟೀಲ ಅವರುಗಳ ನಾಮಪತ್ರ ಸಲ್ಲಿಕೆಯಾಗಿದ್ದವು.   ಒಟ್ಟು 11 ಗ್ರಾ.ಪಂ. ಸದಸ್ಯರಲ್ಲಿ ಇಬ್ಬರು ಗೈರಾಗಿದ್ದರು. ಉಳಿದ ಒಂಬತ್ತು ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಿರಿಜಾ  ಮೋದಗಿ ಇವರಿಗೆ 6 ಮತ  ಉಪಾಧ್ಯಕ್ಷ ಸ್ಥಾನಕ್ಕೆ ಬಸನಗೌಡಾ ಪಾಟೀಲ ಇವರಿಗೆ 6 ಮತ ಪಡೆದು ಆಯ್ಕೆಗೊಂಡರು.   ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಜೈತುನಬಿ  ದೇವಲಾಪೂರ 3 ಮತ ಪಡೆದು ಅದರಲ್ಲಿ 1 ಮತ ತಿರಸ್ಕಾರವಾಗಿತ್ತು. ಉಪಾಧ್ತಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ಚಂದ್ರಗೌಡಾ  ಮುದಕನಗೌಡರ 3 ಮತ ಪಡೆದು ಪರಾಭವಗೊಂಡರೆಂದು ಚುನಾವಣಾಧಿಕಾರಿ ಡಾ.ಶ್ರೀಕಾಂತ ಗಾಂವಿ ತಿಳಿಸಿದ್ದಾರೆ.   ಗ್ರಾ ಪಂ ಸದಸ್ಯರಾದ ಮಂಜುನಾಥ ಹುಚ್ಚನವರ, ಸುಧಾ ಮರಶೆಟ್ಟಿ, ಶಿವಲಿಂಗಪ್ಪ ಹಿರೇಗೌಡರ, ಶ್ರೀಶೈಲ ಪಾಟೀಲ, ಶಿವಲೀಲಾ ಹೂಗಾರ, ಕಸ್ತೂರಿ ಮೇಲಿನಮನಿ, ಕಮಲವ್ವ ಪೂಜೇರ, ಪಿಡಿಓ ಶಿವಲೀಲಾ ಯರಗಟ್ಟಿ ಮುಂತಾದವರು ಇದ್ದರು.  

*** ಗ್ರಾ ಪಂ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಗ್ರಾ ಪಂ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು ನಾನು ಅವರಿಗೆ ಚಿರಋಣಿಯಾಗಿದ್ದೇನೆ. ಬೈಲವಾಡ ಮತ್ತು ಯರಡಾಲ ಗ್ರಾಮದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. ಷ್ತ್ಘ್ತಹ್ಣ ಮೋದಗಿ, ಗ್ರಾ.ಪಂ.ಅಧ್ಯಕ್ಷೆ, ಬೈಲವಾಡ  ಗ್ರಾ.ಪಂ ನಡೆದ ಚುನಾವಣೆಯಲ್ಲಿ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅವರ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದು ಮಾದರಿ ಪಂಚಾಯತ ಮಾಡಲು ಪ್ರಯತ್ನಿಸುತ್ತೇನೆ. 

-ಬಸನಗೌಡ ಪಾಟೀಲ, ಗ್ರಾ.ಪಂ ಉಪಾಧ್ಯಕ್ಷ ಬೈಲವಾಡ 

ಸುದ್ದಿ ಓದಿ