ಬೈಲಹೊಂಗಲ

ವಿದ್ಯಾರ್ಥಿಗಳು ಶೈಕ್ಷಣೀಕ ಪ್ರಗತಿಗೆ ಶ್ರಮಿಸಲು ಜಿಪಂ ಸಿಇಓ ಹರ್ಷಲ್ ಭೋಯಾರ್ ಕರೆ

ವಿದ್ಯಾರ್ಥಿಗಳು ಶೈಕ್ಷಣೀಕ ಪ್ರಗತಿಗೆ ಶ್ರಮಿಸಲು ಜಿಪಂ ಸಿಇಓ ಹರ್ಷಲ್ ಭೋಯಾರ್ ಕರೆ

ಬೈಲಹೊಂಗಲ 06: ಇಂದಿನ ಯುವಜನತೆ ಪುಸ್ತಕಕ್ಕೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರಗಳನ್ನು ಅರಿಯದೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ. ಕಾಲೇಜು ಸಂದರ್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದು ಬೆಳಗಾವಿ ಜಿಪಂ ಸಿಇಓ ಹರ್ಷಲ್ ಭೋಯಾರ್ ಹೇಳಿದರು.

ಅವರು ಪಟ್ಟಣದ ಅಂಬೇಡ್ಕರ ಉದ್ಯಾನವನ ಹತ್ತಿರದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ್ 2023-24ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾಥರ್ಿಗಳ ಸ್ವಾಗತ ಹಾಗೂ ಕ್ರೀಡೆ ಮತ್ತು ಸಂಸ್ಕೃತಿಕ ಇಎಲ್ಸಿ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಎಲ್ಸಿ ಕ್ಲಬ್ ನ ಮಹತ್ವ ಹಾಗೂ ಎನ್ ಎಸ್ ಎಸ್ ನ ಕಾರ್ಯ ಚಟುವಟಿಕೆಗಳ ಕುರಿತು ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿದರು.

ಶಾಸಕ ಮಹಾಂತೇಶ ಕೌಜಲಗಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಬಸವರಾಜ ಕುರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ ವಾಲಿ, ಅಭಿವೃದ್ದಿ ಸಮಿತಿಯ ಸರ್ವ ಸದಸ್ಯರು, ಉಪನ್ಯಾಸಕ ಸಿಬ್ಬಂದಿಗಳು, ವಿದ್ಯಾಥರ್ಿಗಳು ಈ ಸಂದರ್ಭದಲ್ಲಿ ಇದ್ದರು.




 

ಸುದ್ದಿ ಓದಿ