ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ
ಲೋಕದರ್ಶನ ವರದಿ
ಇಂಡಿ 10: ತಾಲೂಕಾ ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲರ ಜನ್ಮ ದಿನದ ಪ್ರಯುಕ್ತ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಕಾರ್ಯಕರ್ತರು ಬಡರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಹಾಗೂ ಬಸ್ ನಿಲ್ದಾಣದಲ್ಲಿ ಕರೋನಾ 3ನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿ ಜನ್ಮದಿನ ಆಚರಿಸಿದರು.
ಈ ಸಂದರ್ಭದಲ್ಲಿ ಸಿದ್ದು ಡಂಗಾ, ಮಹಿಬೂಬ ಬೇನೂರ, ಶ್ರೀಶೈಲಗೌಡ ಪಾಟೀಲ, ಅಯೂಬ್ ನಾಟೀಕಾರ, ಬಸವರಾಜ ಹಂಜಗಿ, ಬಾಬು ಮೇತ್ರಿ, ಖಲೀಲ್ ತೋಳನೂರ, ಮೊಹಮ್ಮದ್ ಬಾಗವಾನ, ರಾಜು ಮುಲ್ಲಾ, ಫಜಲು ಮುಲ್ಲಾ, ಇರ್ಫಾನ ಅಗರಖೇಗ, ನಿಯಾಜ ಅಗರಖೇಡ, ಸಂತೋಷ ರಾಠೋಡ ಮುಂತಾದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.