ರಾಣೆಬೆನ್ನೂರ

ಉಚಿತ ಹೃದಯ ತಪಾಸಣಾ ಶಿಬಿರ ಆರೋಗ್ಯದ ಬಗ್ಗೆ ನಿರ್ಲಕ್ಷತನ ಸಲ್ಲದು :ಡಾ.ರಾಕೇಶ್

ಉಚಿತ ಹೃದಯ ತಪಾಸಣಾ ಶಿಬಿರ ಆರೋಗ್ಯದ ಬಗ್ಗೆ ನಿರ್ಲಕ್ಷತನ ಸಲ್ಲದು :ಡಾ.ರಾಕೇಶ್

ರಾಣೇಬೆನ್ನೂರು  15:  ನಿತ್ಯದ ಬದುಕಿನಲ್ಲಿ ಮಾನವ ಅನುಭವಿಸುತ್ತಿರುವ ಖಿನ್ನತೆ, ಮಾನಸಿಕ ವೇದನೆ, ಕಲುಷಿತ ಆಹಾರ ಮತ್ತು ವಿಶ್ರಾಂತಿ ಇಲ್ಲದ ಜೀವನದ ಪರಿಣಾಮ ಬಂದಿಲ್ಲ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಎಂದು ದಾವಣಗೆರೆಯ ಎಸ್ ಎಸ್ ನಾರಾಯಣ ಹೃದಯಾಲಯದ  ವೈದ್ಯ, ಹೃದಯ ರೋಗ ತಜ್ಞ, ಡಾ .ರಾಕೇಶ್ ಹೇಳಿದರು.         ಎಪಿಎಂಸಿ ರಸ್ತೆಯ ನಾಗ ಶಾಂತಿ ಉನ್ನತಿ ಪ.ಪು. ವಿಜ್ಞಾನ ಕಾಲೇಜಿನ ಸಭಾಭವನದಲ್ಲಿ, ವರ್ತಕ ದಂಪತಿಗಳಾದ ಲಿಂಗೈಕ್ಯ ನಾಗನಗೌಡ ಮತ್ತು ಶಾಂತಾದೇವಿ  ಪಾಟೀಲ್ ಅವರ ಸ್ಮರಣೆಯಲ್ಲಿ, ನಡೆದ, ನಗರಸಭೆ ಮಾಜಿ ಅಧ್ಯಕ್ಷ  ಬಸವರಾಜ ಪಾಟೀಲ್ ಅವರ 60ನೇ ಹುಟ್ಟು ಹಬ್ಬದ ನಿಮಿತ್ತ, ಸಾರ್ವಜನಿಕವಾಗಿ ಆಯೋಜಿಸಿದ್ದ ಉಚಿತ ಹೃದಯ ತಪಾಸಣೆ ಮತ್ತು ಶಸ್ತ್ರಚಿಕಿತಾ ಶಿಬಿರ ಉದ್ಘಾಟಿಸಿ ಮಾತನಾಡಿದರು.     

   ಹೃದಯ ಮನುಷ್ಯನ ಜೀವನದ ಪ್ರಮುಖವಾದ ಅಂಗ, ಹೃದಯದಲ್ಲಿ ವ್ಯತ್ಯಾಸವಾದರೆ, ಯಾವುದೇ ಕಾರಣಕ್ಕೂ ನಿರ್ಲಕ್ಷತನ ಸಲ್ಲದು. ಹೃದಯ ಸಂಬಂಧಿ ಯಾವುದೇ ಕಾಯಿಲೆ ಇದ್ದರೂ ಸಹ, ತಕ್ಷಣವೇ ತಜ್ಞ ವೈದ್ಯರನ್ನು ಕಂಡು ಪರೀಕ್ಷಗೊಳಪಡಬೇಕು. ವೈದ್ಯರು ಸೂಚಿಸಿದ ಔಷಧೋಪಚಾರವನ್ನು  ನಿಗದಿತ ಅವಧಿಯಲ್ಲಿ ಕ್ರಮಾನುಸಾರ ಸೇವಿಸುವುದರ ಮೂಲಕ ಮುಂದಾಗ ಬಹುದಾದ ಅನಾಹುಥವನ್ನು ತಪ್ಪಿಸಿಕೊಳ್ಳಬಹುದಾಗಿದೆ ಎಂದರು.     

ಜನ್ಮದಿನೋತ್ಸವದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ, ಶಿಕ್ಷಣ ಸಂಸ್ಥೆಯ ಮಹಾಪೋಷಕ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಎನ್ ಪಾಟೀಲ್, ಅವರು, ಸಮಾಜದಲ್ಲಿ ಇದ್ದವರು ಇಲ್ಲದವರು ಇದ್ದಾರೆ, ತಮ್ಮ ತಂದೆ ತಾಯಿಗಳು  ತೋರಿಸಿದ ದಾರಿ ವ್ಯವಹಾರಿಕ ಬದುಕು ಅನುಸರಿಸಿಕೊಂಡು ಸಾಗುತ್ತಿದ್ದು, ಅವರು ಬಡತನದಲ್ಲಿ ಸಾಗಿಸಿದ ಹಾದಿಯ ಬಗ್ಗೆ  ತಮ್ಮೊಂದಿಗೆ ಹಂಚಿಕೊಂಡಿದ್ದರು, ಪರಿಣಾಮ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದೇವೆ, ಹಣ ಗಳಿಸುವ ಉದ್ದೇಶದಿಂದ ಕಾಲೇಜು ನಿರ್ಮಿಸಿಲ್ಲ, ಜನಸಾಮಾನ್ಯರಿಗೆ  ಉತ್ತಮ ಶಿಕ್ಷಣ ದೊರಕಿಸುವ ಏಕೈಕ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಎಂದರು. ಸಂಸ್ಥೆಯ ಟ್ರಸ್ಟಿಗಳಾದ ರಾಜೇಶ್ವರಿ ಪಾಟೀಲ್ ಮೇಘಾ ಪಾಟೀಲ್ ಪ್ರಾರ್ಥಿಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೊ .ಬಿ. ಬಿ.ನಂದ್ಯಾಲ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.   

  ಉಪ ಪ್ರಾಚಾರ್ಯ ರೂಪಾ ಪಾಟೀಲ್ ನಿರೂಪಿಸಿ, ವಂದಿಸಿದರು. ಮುಂಜಾನೆಯಿಂದ ಮಧ್ಯಾಹ್ನದವರೆಗೂ ನಡೆದ ಹೃದಯ ತಪಾಸಣಾ ಶಿಬಿರದಲ್ಲಿ 120ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು. ಅದರಲ್ಲಿ 20ಕ್ಕೂ ಹೆಚ್ಚು ನಾಗರಿಕರು ದಾವಣಗೆರೆಯ ಎಸ್ಎಸ್ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಯಿತು.

ಸುದ್ದಿ ಓದಿ