ಬೈಲಹೊಂಗಲ

ಕೂದಲಿನ ಸಮಸ್ಯೆಗೆ ಉಚಿತ ತಪಾಸಣೆ ಶಿಬಿರ

ಕೂದಲಿನ ಸಮಸ್ಯೆಗೆ ಉಚಿತ ತಪಾಸಣೆ ಶಿಬಿರ

ಲೋಕದರ್ಶನ ವರದಿ

ಬೈಲಹೊಂಗಲ 06: ಸೂಕ್ತ ಆಹಾರ ಕ್ರಮ, ಜೀವನ ಶೈಲಿ ಹಾಗೂ ಸಲಹೆಗಳನ್ನು ಪಾಲಿಸಿದರೆ ಪ್ರತಿಯೊಬ್ಬರು ಆರೋಗ್ಯವಂತ ಕೂದಲನ್ನು ಪಡೆದು ಸಂತೋಷದಿಂದ ಇರಬಹುದು ಎಂದು ಡಾ.ಜ್ಯೋತಿ ಅಂಕಲಗಿ ಹೇಳಿದರು.

     ಅವರು ಶನಿವಾರ ವಿಶ್ವ ಬೊಕ್ಕ ತಲೆ ದಿವಸ ಅಂಗವಾಗಿ ಸಮೀಪದ ಇಂಚಲ ಗ್ರಾಮದ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಕೂದಲಿನ ಸಮಸ್ಯೆಗೆ ಉಚಿತ ತಪಾಸಣೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಹಕ್ಕೆ ಆರೈಕೆ ಹೇಗೆ ಅಗತ್ಯವೋ ಹಾಗೆಯೆ ಕೂದಲಿನ ಆರೈಕೆಯು ಮುಖ್ಯ. ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಗಮನ ನೀಡಿ, ಕೂದಲೂ ಹಾಗೂ ಚರ್ಮವನ್ನು ಆರೋಗ್ಯವಾಗಿಡಬೇಕು ಎಂದರು. 

    ಪ್ರಾಚಾರ್ಯ ಡಾ.ವಿನಯಮೋಹನ ಮಾತನಾಡಿ, ಚರ್ಮ ಹಾಗೂ ಕೂದಲಿನ ರಕ್ಷಣೆಗಾಗಿ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೌಂದರ್ಯ ಎಂಬ ಹೊಸ ಪ್ರತ್ಯೇಕ ವಿಭಾಗ ಪ್ರಾರಂಭಿಸಿದ್ದು ಇದರಲ್ಲಿ ಆಯುರ್ವೇದಿಕ ಶಾಸ್ರೋಸ್ರ್ತ ಚಿಕಿತ್ಸೆ ಇದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

     ಶಿವಯೋಗೀಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ ಡಿ.ಬಿ.ಮಲ್ಲೂರ ಅಧ್ಯಕ್ಷತೆ ವಹಿಸಿದ್ದರು. 

       ಶಿಬಿರದಲ್ಲಿ  ತೆಲೆ ಕೂದಲು ಉದುರುವಿಕೆ, ತೆಲೆಹೊಟ್ಟಿನ ಸಮಸ್ಯೆ, ಕೂದಲು ತೆಳ್ಳಗಾಗುವಿಕೆ, ಕೂದಲು ನೆರೆತ  ಕುರಿತು ಚಿಕಿತ್ಸೆ ನೀಡಲಾಯಿತು. ನೂರಾರು ಜನರು ಶಿಬಿರದ ಲಾಭ ಪಡೆದುಕೊಂಡರು. 

     ಡಾ.ಜಿ.ಎಸ್.ಹಾದಿಮನಿ, ಡಾ.ಕೆ.ಎಚ್.ಪಚ್ಚನ್ನವರ, ಡಾ.ಎಸ್.ಎಫ.ಪಾಟೀಲ, ಡಾ.ಮಹೇಶ ಪಾಟೀಲ ಮಹಾವಿದ್ಯಾಲಯದ ಸಿಬ್ಬಂದಿ  ಇದ್ದರು 

ಸುದ್ದಿ ಓದಿ