ನಾಗರಿಕತೆ ಬೆಳೆದಂತೆ ಪ್ರಾಣಿ ಪಕ್ಷಿ ಸಂಕುಲ ನಮ್ಮಿಂದ ದೂರವಾಗುತ್ತಿದೆ: ಪಟ್ಟಣಶೆಟ್ಟಿ
ಸಿಂದಗಿ 01: ನಾಗರಿಕತೆ ಬೆಳೆದಂತೆ ಪ್ರಾಣಿ ಪಕ್ಷಿ ಸಂಕುಲ ನಮ್ಮಿಂದ ದೂರವಾಗುತ್ತಿದೆ ಎಂದು ಯುವ ಸಾಹಿತಿ ಸುಕೃತಾ ಪಟ್ಟಣಶೆಟ್ಟಿ ಹೇಳಿದರು.
ತಾಲೂಕಿನ ಗಣಿಹಾರ ಸರಕಾರಿ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರವೇ ವೈದ್ಯಕೀಯ ಜಿಲ್ಲಾ ಘಟಕ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಎ. 01 ಮೂರ್ಖರ ದಿನದ ಬದಲಾಗಿ ಅರವಟ್ಟಿಗೆ ದಿನ ಕಾರ್ಯಕ್ರಮ ಮತ್ತು ಉಚಿತ ರಕ್ತ ತಪಾಸಣಾ ಶಿಬಿರದಲ್ಲಿ ಅತಿಥಿಯಾಗಿ ಮಾತನಾಡಿದರು.
ಪಕ್ಷಿಗಳಿಗೆ ಆಹಾರಕ್ಕಿಂತಲೂ ನೀರಿನ ಕೊರತೆ ಹೆಚ್ಚಾಗಿದೆ. ಗಣಿಹಾರ ಶಾಲಾ ಮಕ್ಕಳು ಪಕ್ಷಿಗಳಿಗೆ ಆಹಾರದೊಂದಿಗೆ ನೀರು ಪೂರೈಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಪರಿಸರ ಸಂರಕ್ಷಣೆಯಿಂದ ಪ್ರಾಣಿ ಪಕ್ಷಿ ಸಂಕುಲ ರಕ್ಷಿಸಬಹುದು. ಕೆಲ ವರ್ಷಗಳ ಹಿಂದೆ ನೈಸರ್ಗಿಕ ವಿಕೋಪದ ಬಗ್ಗೆ ಪಕ್ಷಿಗಳಿಂದ ಸೂಚನೆ ದೊರೆಯುತ್ತಿತ್ತು. ಸಾಹಿತ್ಯ, ನಿಸರ್ಗ ಮತ್ತು ವಿಜ್ಞಾನಗಳು ಒಂದಕ್ಕೊಂದು ಪೂರಕವಗಿ ಕಾರ್ಯ ಮಾಡುತ್ತವೆ. ಆದರೆ ಮನುಷ್ಯ ಮಾತ್ರ ಈ ಮೂರನ್ನು ಮೂರು ದಿಕ್ಕಿನಲ್ಲಿ ನೋಡಿ ಕಲುಷಿತಗೊಳಿಸುತ್ತಿರುವುದು ವಿಷಾಧನೀಯ ಎಂದರು.
ಕರವೇ ಮುಖಂಡ ಸಂತೋಷ ಪಾಟೀಲ ಉದ್ಘಾಟಿಸಿ ಮಾತನಾಡಿ, ಮಾತೃ ಸಂಸ್ಕ್ರತಿ ಮರೆತು ಬದುಕುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ತನ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹುಟ್ಟುಹಬ್ಬ, ಮದುವೆ, ಹೊಸ ವರ್ಷಗಳ ಸಂದರ್ಭಗಳಲ್ಲಿ ಗಿಡ ನೆಟ್ಟು ಬೆಳಸಬೇಕು. ಪರಿಸರ ಮಾಲಿನ್ಯದಿದಂದ ಪಕ್ಷಿಗಳ ಸಂತತಿ ನಶಿಸುತ್ತಿದೆ. ಅವುಗಳನ್ನು ರಕ್ಷಿಸುವದರ ಜೊತೆಗೆ ಮಕ್ಕಳಿಗೆ ಅವುಗಳ ಪರಿಚಯ ಮಾಡಿಕೊಡಬೇಕು ಎಂದರು.
ಕರವೇ ವೈದ್ಯಕೀಯ ಜಿಲ್ಲಾ ಘಟಕದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಕ್ತ ತಪಾಸಣೆ ನಡೆಸಿ ರಕ್ತದ ಗುಂಪಿನ ವರದಿಯನ್ನು ನೀಡಲಾಯಿತು.
ಅಧ್ಯಕ್ಷತೆಯನ್ನು ಮುಖ್ಯ ಗುರಮಾತೆ ಸೈನಾಬಿ ಮಸಳಿ ವಹಿಸಿದ್ದರು. ಗೋಲಗೇರಿ ತಾಲೂಕ ಪಂಚಾಯತ ಸದಸ್ಯ ಶ್ರೀಶೈಲ ಚಳ್ಳಗಿ, ಸಿಂದಗಿ ಪುರಸಭೆ ಸದಸ್ಯ ಸಂದೀಪ ಚೌರ, ಕರವೇ ವೈದ್ಯಕೀಯ ಜಿಲ್ಲಾಧ್ಯಕ ಮಲ್ಲನಗೌಡ ಬಗಲಿ, ಕರವೇ ಮುಖಂಡರಾದ ಭೀಮಾಶಂಕರ ಕೋಟಾರಗಸ್ತಿ, ಶಶಿಧರ ಗಣಿಹಾರ, ಪೀರು ಕೆರೂರ, ಶರಣಯ್ಯ ನಂದಿಕೋಲ ವೇದಿಕೆಯಲ್ಲಿ ಉಪಸ್ಥಿತರಿದರು.
ಸಿ.ಎಸ್.ಬಮ್ಮಣ್ಣಿ ಜಿ.ಎ.ಮುಲ್ಲಾ ಎಸ್,ಜಿ. ನಾಟೀಕಾರ. ಆರ್.ಸಿ.ಗಬ್ಬೂರ. ಎಸ್.ಎಮ್.ಇನಾಮದಾರ. ಆರ್.ಎಸ್.ಪಟ್ಟಣಶೆಟ್ಟಿ, ಎಮ್.ಡಿ.ಕೆರಕಿ. ಆರ್.ಜಿ.ಬಿರಾದಾರ. ಎಚ್.ಎಸ್.ಮುಲ್ಲಾ. ಎಸ್.ಆರ್.ಪಟೇಲ. ಡಿ.ಎಮ್.ಮಾವೂರ. ಸೇರಿದಂತೆ ಇನ್ನೀತರರು ಇದ್ದರು.
ಕ.ಸಾ.ಪ ಅಧ್ಯಕ್ಷ ಸಿದ್ದಲಿಂಗ ಚೌಧರಿ ಸ್ವಾಗತಿಸಿದರು. ಶಿಕ್ಷಕ ಸಂಜುಕುಮಾರ ಬುಲಬುಲೆ ನಿರೂಪಿಸಿದರು. ಎಸ್.ಬಿ.ಬಿರಾದಾರ ವಂದಿಸಿದರು.