ಕ್ಯಾನ್ಸರ್ ಮುಕ್ತ ಗ್ರಾಮಕ್ಕಾಗಿ ಉಚಿತ ಎಚ್.ಪಿ.ವ್ಹಿ ವ್ಯಾಕ್ಸಿನ್
ಧಾರವಾಡ 09: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆ, ಟಾಟಾ ಹಿಟ್ಯಾಚಿ, ಧಾರವಾಡ ಮತ್ತು ಗ್ರಾಮ ಪಂಚಾಯತಿ ಕುರುಬಗಟ್ಟಿ ಇವರ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಕುರುಬಗಟ್ಟಿ ಗ್ರಾಮದಲ್ಲಿ ಗರ್ಭಾಶಯ ಕೊರಳಿನ ಕ್ಯಾನ್ಸರ್ ತಡೆಯುವ ಉಚಿತ ಎಚ್.ಪಿ.ವ್ಹಿ. ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಮತ್ತು ಗರ್ಭಾಶಯ ಕೊರಳಿ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಮಕ್ಕಳ ತಜ್ಞ ಮತ್ತು ಎಫ್.ಪಿ.ಎ.ಐ ಸ್ವಯಂಸೇವಕರಾದ ಡಾ ಅಚ್ಯುತ ಮಾತನಾಡಿ, ಇಂದು ಹಲವಾರು ರೀತಿಯ ಕ್ಯಾನ್ಸರ್ ಗಳು ನಮ್ಮನ್ನು ಕಾಡುತ್ತಿವೆ. ಮನುಷ್ಯನ ದೇಹದ ಯಾವುದೇ ಭಾಗಕ್ಕೂ ಕ್ಯಾನ್ಸರ್ ಬರಬಹುದು. ಒಟ್ಟು ಕ್ಯಾನ್ಸರ್ ಗಳಲ್ಲಿ ಶೇಕಡಾ 90ಕ್ಕೂ ಹೆಚ್ಚು ಪ್ರತಿಶತ ಗರ್ಭಾಶಯ ಕೋರಳಿನ ಕ್ಯಾನ್ಸರ್ಗೆ ಒಳಗಾಗುತ್ತಿದ್ದು ಇದನ್ನು ತಡೆಯುವದು ಅತ್ಯವಶ್ಯವಾಗಿದೆ. ಈ ದೇಶೆಯಲ್ಲಿ ಎಫ್.ಪಿ.ಎ.ಐ ಸಂಸ್ಥೆಯು ಎಚ್.ಪಿ.ವ್ಹಿ. ಚುಚ್ಚುಮದ್ದು ನೀಡುವ ಮೂಲಕ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿದೆ. ಈ ಚುಚ್ಚುಮದ್ದು 2000 ಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿದೆ. ಟಾಟಾ ಹಿಟ್ಯಾಚಿ, ಧಾರವಾಡ ಇವರ ಸಹಾಯದಿಂದ ಈ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ. ಚುಚ್ಚುಮದ್ದಿನ ಕುರಿತು ತಿಳುವಳಿಕೆ ಮೂಡಿಸಲು ಗ್ರಾಮದ ಯುವಕರು ಮತ್ತು ಹಿರಿಯರು ಮನೆ ಮನೆಗೆ ಹೋಗಿ ಪಾಲಕರ ಮನವೊಲಿಸಿರುದು ಪ್ರೇರಣಾದಾಯಿ, ಸಮುದಾಯದ ಸಹಭಾಗಿತ್ವಕ್ಕೆ ಉತ್ತಮ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಟಾಟಾ ಹಿಟ್ಯಾಚಿ ಸಿ.ಎಸ್.ಆರ್ ಮುಖ್ಯಸ್ಥರಾದ ಪ್ರಶಾಂತ ದಿಕ್ಷಿತ್ ಮಾತನಾಡಿ ರೋಗ ಬಂದ ನಂತರ ತೊಂದರೆ ಅನುಭವಿಸುವದಕ್ಕಿಂತ ರೋಗ ಬರದೇ ಇರುವಂತೆ ನೋಡಿಕೊಳ್ಳುವದು ಮುಖ್ಯ. ಹೀಗಾಗಿ ನೀವು ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿ ಮಕ್ಕಳಿಗೆ ಚುಚ್ಚುಮದ್ದು ತಗೆದುಕೊಳ್ಳುವದು ಬಹಳ ಸಂತೋಷಕರ ಸಂಗತಿಯಾಗಿದೆ. ಜೊತಗೆ ಮಹಿಳೆಯರಿಗೆ ಗರ್ಭಾಶಯ ಕೊರಳಿ ತಪಾಸಣೆ ಮಾಡುವ ಮೂಲಕ ಆಂರಭಿಕ ಹಂತದ ಕ್ಯಾನ್ಸರ್ ತಡೆಯುವ ಉತ್ತಮ ಪ್ರಯತ್ನವಾಗಿದೆ. ಗ್ರಾಮದ ಹಿರಿಯರು ಮತ್ತು ಪಾಲಕರ ಸಹಕಾರ ತುಂಬಾ ಚನ್ನಾಗಿದೆ ಮತ್ತು ನಮ್ಮ ಕಂಪನಿಯಿಂದ ಇನ್ನು ಹೆಚ್ಚಿನ ಸಹಾಯ ನೀಡುವ ಇಂಗಿತ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನಾಗರತ್ನಾ ತಪೇಲಿ ಮಾತನಾಡಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆಯು ಇಂತಹ ಉತ್ತಮ ಯೋಜನೆಯನ್ನು ನಮ್ಮ ಗ್ರಾಮಕ್ಕೆ ತಂದಿರುವದು ಸಂತೋಷದ ಸಂಗತಿಯಾಗಿದೆ. ಇಂದು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ನಮ್ಮ ಗ್ರಾಮಕ್ಕೆ ಬರುವ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಸದುಪಯೋಗ ಪಡಿಸಿಕೊಳ್ಳಲು ಶ್ರಮಿಸೋಣ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪುಂಡಲಿಕ ಗುಂಡಗೋವಿ, ಉಪಾಧ್ಯಕ್ಷರಾದ ಕ್ರಿಷ್ಣಾಜೀ, ಪೌಢ ಶಾಲಾ ಶಿಕ್ಷರಾದ ಗಸ್ತಿ ಸರ್, ಸುನಿತಾ ಪಾಟೀಲ, ಗ್ರಾಮದ ಹಿರಿರಾದ ಹನುಮಂತಗೌಡ ಪಾಟೀಲ, ಮೈಲಾರಿ ಗುಡ್ಡಪ್ಪನವರ, ಡಾ. ಸರ್ಸರಿನ್ ಹೊನ್ನಳ್ಳಿ, ಆಶಾ ಕೋರಿಶೆಟ್ಟರ ಮತ್ತು ಟಾಟಾ ಹಿಟ್ಯಾಚಿ ಹಾಗೂ ಎಫ್.ಪಿ.ಎ.ಐ ಸಿಬ್ಬಂದಿ, ಮಹಿಳೆಯರು, ಮಕ್ಕಳು ಸೇರಿ 200 ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
10 ರಿಂದ 14 ವರ್ಷದ 102 ಹೆಣ್ಣು ಮಕ್ಕಳಿಗೆ ಉಚಿತ ಎಚ್.ಪಿ.ವ್ಹಿ ಚುಚ್ಚುಮದ್ದು ನೀಡಲಾಯಿತು. 65 ಮಹಿಳೆ ಗರ್ಭಾಶಯ ಕೊರಳಿ ತಪಾಸಣೆ ಮಾಡಲಾಯಿತು. ಟಾಟಾ ಹಿಟ್ಯಾಚಿ ಕಂಪನಿ ಆರ್ಥಿಕ ಸಹಾಯ ನೀಡಿದ್ದರು.
ಎಫ್.ಪಿ.ಎ.ಐ ಶಾಖೆಯ ಕಾರ್ಯಕ್ರಮ ಅಧಿಕಾರಿ ಎನ್.ಎಫ್.ಮಡಿವಾಳರ ಪ್ರಾಸ್ತಾವಿಕ ಮಾತನಾಡಿದರು. ಬಸಮ್ಮಾ ದೇಸಾಯಿ ಸ್ವಾಗತಿಸಿದರು, ಆಶಾ ಕೋರಿಶೆಟ್ಟರ ವಂದಿಸಿದರು, ಪ್ರಕಾಶ ಜೋಡಳ್ಳಿ ನಿರೂಪಿಸಿದರು. ಆಸಕ್ತರು ಚುಚ್ಚುಮದ್ದಿಗಾಗಿ 0836-2441796/2447896 ಕರೆ ಮಾಡಬಹುದಾಗಿದೆ.