ಇಂಡಿ

ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ

ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ

ಇಂಡಿ  03 : ಕಣ್ಣುಗಳ ದೃಷ್ಟಿಯು ಸಮರ​‍್ಕವಾಗಿ ಇದ್ದರೆ ಕುಳಿತ ಸ್ಥಳದಿಂದಲೆ ಜಗತ್ತನ್ನು ವೀಕ್ಷಿಸುವ ಶಕ್ತಿ ಪ್ರತಿಯೊಬ್ಬರಲ್ಲಿದೆ ಎಂದು  ಡಾ ಕೆ ಎಸ್ ಜಾಧವ ಹೇಳಿದರು.ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಮರುಳಸಿದ್ದೇಶ್ವ ಜಾತ್ರೆಯ ನಿಮಿತ್ಯವಾಗಿ ಸಂಸ್ಥೆ ವಿಜಯಪೂರ ಹಾಗೂ ತಡವಲಗಾ ಸಮುದಾಯದ ಆರೋಗ್ಯ ಕೇಂದ್ರ ಹಾಗೂ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ ಕೆ ಎಸ್ ಜಾಧವ ಅವರು ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದು ಅದರಲ್ಲೂ ವಿಶೇಷವಾಗಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ.  

ನಿತ್ಯ ಜೀವನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ನಾವು ಈ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವತಿಯಿಂದ ರಾಘು ಚವ್ಹಾಣ, ಆಸ್ಪತ್ರೆಯ ಡಾ ಸಿದ್ದಾಂತ, ಕಿರ್ತಿ ವಾಲಿ,ಪ್ರೀಯಾ ಸೌಂದರ್ಯ ಮಡಿವಾಳರ,ನೀಕಿತಾ ಶಿವೂರ,ಕಲ್ಲಪ ಸಾರವಾಡ ಹಾಗೂ ಆರೋಗ್ಯ ಇಲಾಖೆ,ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ