ಬಳ್ಳಾರಿ

ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಲು ಏಳು ಜನರ ವಿಶೇಷ ಸಮಿತಿ ರಚನೆ

ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಲು ಏಳು ಜನರ ವಿಶೇಷ ಸಮಿತಿ ರಚನೆ

ಬಳ್ಳಾರಿ 21: ಕಲ್ಯಾಣ ಕರ್ನಾಟಕ ಪ್ರದೇಶ ಚೇಂಬರ್ ಆಫ್ ಕಾಮರ್ಸ್‌ ಮೂಲಕ ಸಾರ್ವಜನಿಕಢ, ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಆಸ್ತಿ ತೆರಿಗೆ, ಎಪಿಎಂಸಿ ಸೆಸ್, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರಚನೆ ಸೇರಿ ವಿವಿಧ ವಿಷಯಗಳ ಕುರಿತು ಸರ್ಕಾರದ ಜೊತೆ ನಿರಂತರ ಚರ್ಚೆ ನಡೆಸಲು ಏಳು ಜನರ ವಿಶೇಷ ಸಮಿತಿಯನ್ನು ರಚಿಸಲಾಗಿದೆ.   

ರಾಯಚೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಚೇಂಬರ್ ಆಫ್ ಕಾಮರ್ಸ್‌ ಸಂಸ್ಥೆಗಳ ಎರಡನೇ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ರಾಮಚಂದ್ರ ಪ್ರಭು, ಮಸ್ಕಿ ನಾಗರಾಜ್, ವೆಂಕಟರೆಡ್ಡಿ, ಅಶೋಕಸ್ವಾಮಿ ಹೇರೂರು, ದೀಪಕ್ ಗಾಲಾ ಮತ್ತು ಅಶ್ವಿನ್ ಕೋತಂಬರಿ ಅವರು ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿಯು ಕಾನೂನಾತ್ಮಕ ಹೋರಾಟದ ಕುರಿತೂ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ ಎನ್ನಲಾಗಿದೆ.   

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರೂ, ಕಲ್ಯಾಣ ಕರ್ನಾಟಕ ಪ್ರದೇಶ ಚೇಂಬರ್ ಆಫ್ ಕಾಮರ್ಸ್‌ ವಿಶೇಷ ತಂಡದ ಅಧ್ಯಕ್ಷರಾಗಿರುವ ಯಶವಂತರಾಜ್ ನಾಗಿರೆಡ್ಡಿ ಅವರು ಈ ಮಾಹಿತಿ ನೀಡಿದ್ದು, ಕಲ್ಯಾಣ ಕರ್ನಾಟಕ ಚೇಂಬರ್ನ ಮೂರನೇ ಅಂತರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ಆತಿಥ್ಯವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆವಹಿಸಲಿದೆ.   

ಬಳ್ಳಾರಿಯಲ್ಲಿ ನಡೆಯುವ ಸಭೆಯ ದಿನಾಂಕವನ್ನು ನಿರ್ಧರಿಸಿ, ಪ್ರಕಟಿಸಲಾಗುತ್ತದೆ ಎಂದರು.   

ರಾಯಚೂರುನಲ್ಲಿ ನಡೆದ ಕಲ್ಯಾಣ ಕರ್ನಾಟಕ ಚೇಂಬರ್ನ ಮೂರನೇ ಅಂತರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಬಳ್ಳಾರಿ - ವಿಜಯನಗರ, ಕೊಪ್ಪಳ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಹೆಚ್ಚುವರಿಯಾಗಿ ರಾಯಚೂರು ರೈಸ್ ಮಿಲ್ಲರ್ಸ್‌ ಅಸೋಸಿಯೇಷನ್ ಪಾಲ್ಗೊಂಡಿದ್ದರು ಎಂದು ಹೇಳಿದರು. 


ಸುದ್ದಿ ಓದಿ