ಬೈಲಹೊಂಗಲ

ಪ್ರೌಢಶಾಲೆಯಲ್ಲಿ ಮಾದರಿ ಸಂಸತ್ತು ರಚನೆ: ಮತದಾನ ಜಾಗೃತಿ

ಪ್ರೌಢಶಾಲೆಯಲ್ಲಿ ಮಾದರಿ ಸಂಸತ್ತು ರಚನೆ: ಮತದಾನ ಜಾಗೃತಿ

ಲೋಕದರ್ಶನ ವರದಿ:

ಬೈಲಹೊಂಗಲ 28: ಪಟ್ಟಣದ ಅಂಬೇಡ್ಕರ ನಗರದ ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಹೊಸದಾಗಿ ಮತದಾನ ಜಾಗೃತಿ ಮೂಡಿಸಿ, ಚುಣಾವಣಾ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುವ ವಿನೂತನ ಪ್ರಯತ್ನದಲ್ಲಿ ಶಾಲಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮಾದರಿ ಸಂಸತ್ತು ರಚನೆ ಮಾಡಿ ಮಕ್ಕಳಿಗೆ ಮತದಾನ ಪ್ರಕ್ರಿಯೆಯ ಮಾಹಿತಿ ನೀಡಿದ್ದಾರೆ. ಚುನಾವಣಾ ಆಯೋಗದ ಮಾದರಿಯಲ್ಲೆ ಮಕ್ಕಳಿಂದ ಮತದಾನ ಮಾಡಿಸಿ ಜಾಗೃತಿ ಮೂಡಿಸಿದ್ದಾರೆ. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತದಾನ, ಮತ ಎಣಿಕೆ ಎಲ್ಲವನ್ನೂ ಸಹ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ. ಚುನಾವಣಾ ಆಯೋಗ ಮಾದರಿಯಲ್ಲೆ ಎಲ್ಲ ಹಂತದ ಪ್ರಕ್ರಿಯೆ ಮಾಡಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗಿದೆ.

    ಪ್ರಜಾಪ್ರಭುತ್ವದ ವಿವಿಧ ಹಂತಗಳಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಚುನಾವಣಾ ಪ್ರಕ್ರಿಯೆಯನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಇಡೀ ಚುನಾವಣೆಗೆ ನೈಜ ವಿಧಾನ ನೀಡಲು ವಿದ್ಯಾರ್ಥಿಗಳ ತೋರು ಬೆರಳಿಗೆ ಶಾಯಿ ಹಾಕಲಾಯಿತು.  

ಮಕ್ಕಳೇ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಿ ಮೊದಲ ಬಾರಿಗೆ ಚುನಾವಣೆ ಅನುಭವ ಪಡೆದರು. ನಿಜವಾದ ವಿಧಾನ ಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಹಿಂತೆಗೆದು ಕೊಳ್ಳುವಿಕೆ, ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏರ್ಪಟ್ಟಿತ್ತು. ಪ್ರಜಾ ಪ್ರಭುತ್ವ ಎಂದರೆ ಏನು? ಮತದಾನದ ರೀತಿ ನೀತಿಗಳೇನು, ಮತದಾನ ಹೇಗೆ ಮಾಡಬೇಕು, ಸಂಸತ್ ಹೇಗಿರುತ್ತದೆ, ಮುಖ್ಯಮಂತ್ರಿಗಳ ಕೆಲಸ, ಮಂತ್ರಿಗಳ ಕಾರ್ಯಗಳ ಕುರಿತು ಚುನಾವಣೆ ಮತ್ತು ಸಂಸತ್ ರಚನೆ ಮೂಲಕ ಎಲ್ಲದರ ಬಗ್ಗೆ ವಿದ್ಯಾಥರ್ಿಗಳು ಮಾಹಿತಿ ಪಡೆದರು.

     ಪ್ರಧಾನ ಗುರುಮಾತೆ ಬಿ.ಆರ್ ಪಾಟೀಲ, ಬಿ.ಎಸ್.ವಾಣಿಶ್ರೀ, ಎಂ.ಜೆ.ಕೆ. ಹಿರೇಮಠ, ಕೆ.ಎಸ್.ಕಾಂಬಳೆ, ಡಿ.ಆರ್.ಜಾಧವ,  ಜಿ.ಐ ಕಮತ, ಎ.ಎಂ.ವಿವೇಕಿ, ಕೆ.ಪಿ.ಸೊಂಟಕ್ಕಿ, ಎಸ್.ಜೆ.ಅರುಣಾಚಲಮಠ, ಎಂ.ಎಸ್.ಪಾರ್ವತಿ, ಎಸ್.ಎಸ್.ಪಟ್ಟಿಹಾಳ ಇದ್ದರು 

ಸುದ್ದಿ ಓದಿ