ಅಥಣಿ

ಕರವೇಯಿಂದ ಅಟೋ ಚಾಲಕರಿಗೆ ಧ್ವಜ ವಿತರಣೆ

ಕರವೇಯಿಂದ ಅಟೋ ಚಾಲಕರಿಗೆ ಧ್ವಜ ವಿತರಣೆ

ವೆಂಕಟೇಶ ದೇಶಪಾಂಡೆ

ಅಥಣಿ 01:ಕರ್ನಾಟಕ  ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಮೂಲಕ ಅಥಣಿ ಪಟ್ಟಣದ ಅಟೋ ಚಾಲಕರಿಗೆ, ಪತ್ರಕರ್ತರಿಗೆ ಹಾಗೂ ಮುಖ್ಯ ರಸ್ತೆಯ ಅಂಗಡಿಕಾರರಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕರಾಜ್ಯದ ಧ್ವಜಗಳನ್ನು ವಿತರಿಸಲಾಗುತ್ತಿದೆ ಎಂದು ರಕ್ಷಣಾ ವೇದಿಕೆ ಅಧ್ಯಕ್ಷ ಅಣ್ಣಾಸಾಹೇಬ ತೆಲಸಂಗ ಹೇಳಿದರು. 

    ಅವರು ಅಂಬೇಡ್ಕರ ವೃತ್ತದಲ್ಲಿ ಅಟೋ ಚಾಲಕರಿಗೆ ಧ್ವಜ ವಿತರಿಸಿ ಮಾತನಾಡುತ್ತಿದ್ದರು. ರಕ್ಷಣಾ ವೇದಿಕೆ ಮೂಲಕ 67 ನೇ ರಾಜ್ಯೋತ್ಸವದ ಅಂಗವಾಗಿ ಇಡೀ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಧ್ವಜಗಳನ್ನು ವಿತರಿಸುವ ಕಾರ್ಯ ಈಗಾಗಲೇ ಕೆಲ ದಿನಗಳ ಮೊದಲಿನಿಂದಲೂ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿದ್ದಾರೆ ಇದರಿಂದ ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದರು. 

    ಸಾರ್ವಜನಿಕರು ಕೂಡ ನವ್ಹೆಂಬರ 1ರಂದು ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬೇಕು ಎಂದ ಅವರು ನ. 1ರಿಂದ ಒಂದು ವಾರದವರೆಗೆ ರಾಜ್ಯದ ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ರಕ್ಷಣಾ ವೇದಿಕೆಯಿಂದ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. 

   ರಕ್ಷಣಾ ವೇದಿಕೆಯ ಜಗನ್ನಾಥ ಬಾಮನೆ, ರಾಜು ವಾಘಮೋರೆ, ಶಂಕರ ಮಗದುಮ್, ಕುಮಾರ ಬಡಿಗೇರ, ಶಿವಾನಂದ ಪೂಜಾರಿ, ಉದಯ ಮಾಕಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು 

ಸುದ್ದಿ ಓದಿ