ಚಲನಚಿತ್ರ ಗೀತೆಗಳ ಸ್ಪರ್ಧೆ : ಯುವ ಪ್ರತಿಭೆಗಳಿಗೆ ಸಾಕ್ಷಿಯಾದ ಕಾಕಿ ಜನಸೇವಾ ಸಂಸ್ಥೆ
ರಾಣೇಬೆನ್ನೂರು 01: ನಗರದ ಕಾಕಿ ಜನ ಸೇವಾ ಸಂಸ್ಥೆ, ತನ್ನ ವಾರ್ಷಿಕ ಸಂಪ್ರದಾಯದ ರಾಣೇಬೆನ್ನೂರು ತಾಲೂಕ ಮಟ್ಟದ ಕರೋಕೆ ಚಲನಚಿತ್ರ ಗೀತೆಗಳ ಸ್ಪರ್ಧೆಯು, ಮಂಗಳವಾರ ಶ್ರೀ ಗಣೇಶೋತ್ಸವ ಮಹಾಮಂಟಪದಲ್ಲಿ ಅದ್ದೂರಿ ಜನ ಸಾಗರದ ಮಧ್ಯೆ 50ಕ್ಕೂ ಹೆಚ್ಚು ಹಿರಿಯ ಕಿರಿಯ ಭವಿಷ್ಯದ ಸಾಂಸ್ಕೃತಿಕ ರಾಯಭಾರಿಗಳು, ಅತೀವ ಸ್ಪರ್ಧಾತ್ಮಕತೆಯಲ್ಲಿ ತಮ್ಮ ಪ್ರತಿಭೆ ಮೆರೆದರು. ಕಲಾಪೋಷಕ ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ, ಶ್ರೀನಿವಾಸ ಕಾಕಿ ಅವರು, ಚಿತ್ರಗೀತೆ ಹಾಡುವುದರ ಮೂಲಕ ಅಧಿಕೃತ ಸ್ಪರ್ಧೆಗೆ ಚಾಲನೆ ನೀಡಿದರು.
50ಕ್ಕೂ ಹೆಚ್ಚು ಸ್ಪರ್ದಾಳುಗಳು ಪಾಲ್ಗೊಂಡು ತಮ್ಮ ಅಪೇಕ್ಷಿತ ಚಿತ್ರಗಳ, ಆರಾಧ್ಯ ಗಾಯಕರ ಆಯ್ಕೆಯ ಚಲನಚಿತ್ರಗಳ ಗೀತೆಗಳನ್ನು ಹಾಡುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಸ್ಪರ್ಧೆಯು ಸಂಜೆ 7 ಗಂಟೆಯವರೆಗೆ ನಡೆದಿದ್ದು, ಹಾಡುಗಾರರ ಅಭಿರುಚಿಗೆ ಕಾರ್ಯಕ್ರಮದ ವೇದಿಕೆ ಸಾಕ್ಷಿಯಾಯಿತು.
ನಿರ್ಣಾಯಕರ ಅಂತಿಮ ನಿರ್ಣಯದಲ್ಲಿ ಭವಿಷ್ಯದ ಯುವ ಗಾಯಕಿ ರಮ್ಯಾರಾಣಿ ಆರ್. ಎಂ. ಪ್ರಥಮ-5000, ಮುತ್ತುರಾಜ್ ಸಾವಕ್ಕನವರ, ದ್ವಿತೀಯ-4000, ಸುನಿಲ್ ಎಲ್. ಜೆ. ತೃತಿಯ -3000, ಹಾಗೂ ಖಂಡೆಪ್ಪ ಪೂಜಾರ ಸಮಾಧಾನಕರ -1000, ವಿಜೇತರಿಗೆ ನಗದು ಮೊತ್ತ, ಆಕರ್ಷಕ ಪಾರಿತೋಷಕ ಮತ್ತು ಪ್ರಮಾಣ ಪತ್ರ ವಿತರಿಸಿ ಸಾರ್ವಜನಿಕವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ಯಶಸ್ವಿಗೆ ಕುರುಹಿನ ಶೆಟ್ಟಿ ಸಮಾಜ ಸೇವಾ ಸಂಘ, ಜೆಸಿಐ, ಜೆಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ, ಹಾಗೂ ಶ್ರೀ ಕಾಕಿ ಸೌಹಾರ್ದ ಸಹಕಾರಿ ನಿಯಮಿತವು, ತುಂಬು ಸಹಕಾರ ನೀಡಿದ್ದರು. ನಿರ್ಣಾಯಕರಾಗಿ ನಾಡಿನ ಖ್ಯಾತ ಕಲಾವಿದರಾದ, ಕೆ.ಸಿ. ನಾಗರಜ್ಜಿ, ಪ್ರಕಾಶ್ ಗಚ್ಚಿನಮಠ, ಕೆ.ಎಸ್.ನಾಗರಾಜ್, ಎ. ಎ. ಕಿಲ್ಲೇದಾರ ಅವರು ಕಾರ್ಯನಿರ್ವಹಿಸಿದರು. ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ, ಹನುಮಂತಪ್ಪ ಕಾಕಿ, ಹನುಮಂತಪ್ಪ ಅಮಾಸಿ, ಶಿವಾನಂದ ಸಾಲಗೇರಿ, ದೊಡ್ಡ ಹನುಮಂತಪ್ಪ ಕಾಕಿ, ವಿಜಯಲಕ್ಷ್ಮಿ ಕಾಕಿ, ವೆಂಕಟೇಶ ಕಾಕಿ, ಲಕ್ಷ್ಮಿ ಕಾಕಿ, ರೂಪಾ ಕಾಕಿ, ಮಂಜುನಾಥ ಕಾಟಿ, ಶೋಭಾ ಹೊಸಪೇಟೆ, ಗಂಗಮ್ಮ ಕಾಕಿ, ಮಂಜುನಾಥ ಹೊಸಪೇಟೆ, ಆಂಜನೇಯ ಚಿಂತಾ, ಎನ್.ಜಿ. ಕುಂದಾಪುರ್, ಕೊಟ್ರೇಶಪ್ಪ ಎಮ್ಮಿ, ಲಕ್ಷ್ಮಣ ಕಣಕಿ, ಪ್ರಭುಲಿಂಗಪ್ಪ ಹಲಗೇರಿ, ಶಿವಾನಂದ ಬಗಾದಿ, ಶಿವಣ್ಣ ಬಣಕಾರ್, ಸೇರಿದಂತೆ ಜೆಸಿಐ ಸದಸ್ಯರು, ಪದಾಧಿಕಾರಿಗಳು ಮತ್ತಿತರ ಸಂಘಟನೆಗಳ ಸದಸ್ಯರು, ಮುಖಂಡರು, ಉಪಸ್ಥಿತರಿದ್ದರು.