ಬಳ್ಳಾರಿ

ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ ಐವತ್ತು ವರ್ಷ: ಸಾಧಕರಿಗೆ ಸನ್ಮಾನ

ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ ಐವತ್ತು ವರ್ಷ: ಸಾಧಕರಿಗೆ ಸನ್ಮಾನ

ಬಳ್ಳಾರಿ ಅ14: ಅ.14ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಐವತ್ತು ವರ್ಷಗಳು ಪೂರ್ಣಗೊಳ್ಳುತ್ತಿರುವ ಸುವರ್ಣ ಮಹೋತ್ಸವದ ವರ್ಷದ ಸಂದರ್ಭದಲ್ಲಿ ಹಾಗೂ 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕನ್ನಡ ಭಾಷೆಯನ್ನು ಉಳಿಸಲು ಮತ್ತು ಬೆಳೆಸಲು ಬಾರಿಸು ಕನ್ನಡ ಡಿಂಡಿಮವ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯ ಮಟ್ಟದ ಕರ್ನಾಟಕ  ಸಾಧಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವುದಾಗಿ ಶ್ರೀ ಮಹಾದೇವ ಎಜುಕೇಷನ್, ಆರ್ಟ್ & ಕಲ್ಚರಲ್ ಟ್ರಸ್ಟ್(ರಿ), ಜಿಲ್ಲಾ  ಗೌರವಾಧ್ಯಕ್ಷ ಬಸವರಾಜ್ ಬಿಸಿಲಹಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈಗಾಗಲೇ ಆಯ್ಕೆ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಸಂಬಠಧಪಟ್ಟ ಸಮಿತಿ ಸದಸ್ಯರು ಕಾರ್ಯಗತಗೊಳಿಸಿದ್ದಾರೆ ಎಂದು ತಿಳಿಸಿದರು. ಸಾಧಕರ ಮಾಹಿತಿ, ಕವಿಗೋಷ್ಠಿಯ ಅತ್ಯುತ್ತಮ ಕವನಗಳು, ಭಾಷಣ, ಪ್ರಬಂಧಗಳನ್ನು ಸಂಗ್ರಹ ಮಾಡಿ, ಕರ್ನಾಟಕ  ಕಾವ್ಯ ಲಹರಿ ಎನ್ನುವ ಪುಸ್ತಕವನ್ನು ಮುಖ್ಯ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಕನರ್ಾಟಕದ ಗತವೈಭವ ಸಾರುವ ಪುಲಕೇಶಿಯಿಂದ ಪುನಿತ್ರಾಜ್ಕುಮಾರ್ ವರೆಗೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ರಂಗ ನಿರ್ದೇಶಕ ನೇತಿ ರಘುರಾಮ ನಿರ್ದೇಶನದಲ್ಲಿ ನಾಟಕ, ನೃತ್ಯ ಮತ್ತು ಗಾಯನದ ಮೂಲಕ ರಾಜ್ಯದ ಹಲವಾರು ಉದಯೋನ್ಮುಖ ಕಲಾವಿದರಿಂದ ಆಯೋಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅ. 15ರಂದು ನೃತ್ಯಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯನ್ನು ಹಾಗೂ ಅಕ್ಟೋಬರ್ 29ರಂದು ಪ್ರಬಂಧ ಸ್ಪರ್ಧೆ ಮತ್ತು ಗಾಯನ ಸ್ಪರ್ಧೆಗಳನ್ನು ಹಾಗೂ ನವೆಂಬರ್ 26ರಂದು ಕನ್ನಡ ರಾಜ್ಯೋತ್ಸವದ ಮುಖ್ಯ ಕಾರ್ಯಕ್ರಮದಲ್ಲ್ಲಿ ಕವಿಗೋಷ್ಠಿ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದಾಗಿ ಹಾಗೂ ಇಲ್ಲಿಯವರೆಗೆ ಸುಮಾರು 133 ಏಕವ್ಯಕ್ತಿ ಮತ್ತು ಸಮೂಹ ನೃತ್ಯಗಳಿಗೆ, 53 ಭಾಷಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ  ಸ್ಪರ್ಧೆಗಳು ಆನ್ ಲೈನ್ ಮೂಲಕ ನೊಂದಾಯಿಸಿದ್ದಾರೆಂದು ಸಾಂಸ್ಕೃತಿಕ ಕಾರ್ಯದರ್ಶಿ ಸುಮ ನಾಡಿಗೇರ ಅವರು ತಿಳಿಸಿದ್ದಾರೆ. 

 ಉಪಾಧ್ಯಕ್ಷ ಹೆಚ್.ರೇಣುಕಾ, ಪ್ರಧಾನ ಕಾರ್ಯದರ್ಶಿ ಕೆ ತಿಪ್ಪೇರುದ್ರಪ್ಪ, ಕಾರ್ಯದರ್ಶಿ ಸುಧೀಂದ್ರ ನಾಡಿಗೇರ, ಸಹ ಕಾರ್ಯದರ್ಶಿ ಕೆ ಕೋದಂಡರಾಮ, ರಾಮ ಮತ್ತು ಖಜಾಂಚಿ ಜಿ ಹರಿಪ್ರಸಾದ್ ಇವರು ಎಲ್ಲಾ ಸಮಿತಿಗಳ ನೇತೃತ್ವವನ್ನು ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ 

ಸುದ್ದಿ ಓದಿ