ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಘಾ ಅಗ್ರವಾಲಗೆ ಸನ್ಮಾನ
ಹುಬ್ಬಳ್ಳಿ 24 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಖ್ಯಾತ ಲೆಕ್ಕಪರಿಶೋಧಕರು, ಬಸವಾಭಿಮಾನಿಗಳು, ಸದಾ ಹಸನ್ಮುಖಿ, ಆತ್ಮೀಯರಾದ ಸಿಎ ಚೆನ್ನವೀರ ಡಿ. ಮುಂಗರವಾಡಿ ಅವರ ಮಾಗದರ್ಶನದಲ್ಲಿ ಮೇ/ಜೂನ್ ತಿಂಗಳಲ್ಲಿ ನವದೇಹಲಿಯ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಘಾ ಅಗ್ರವಾಲ, ಅವರಿಗೆ ಶಾಲು, ಮಾಲಾರೆ್ಣ ಮಾಡಿ, ಗ್ರಂಥ ನೀಡಿ ಪ್ರೀತಿ, ಆತ್ಮೀಯತೆಯಿಂದ ಆಶೀರ್ವಾದ ರೂಪದಲ್ಲಿ ಹೃದಯಪೂರ್ವಕವಾಗಿ ಗೌರವಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿ ಶುಭ ಕೋರಿದರು.
ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್.ಎಂ.ಸಾತ್ಮಾರ, ಉಪಾಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ, ನುಡಿ ಕನ್ನಡ ಬಳಗದ ವೀರಣ್ಣ ಹೂಲಿ, ಸಿಎ ಚೆನ್ನವೀರ ಡಿ. ಮುಂಗರವಾಡಿ, ಸೃಷ್ಟಿ ಚಿಕ್ಕಲಗುಡ್ಡ, ಅಶ್ವಿನಿ ದೇವರೆಡ್ಡಿ, ಮಾರುತಿ ಕಲಬುರ್ಗಿ, ಮಂಜುನಾಥ ನೂಲ್ವಿ, ಕಿಶನ್ ಪವಾರ, ಮುಂತಾದವರು ಇದ್ದರು.