ಸಾಲಬಾಧೆ: ರೈತ ನೇಣಿಗೆ ಶರಣ
ಬೈಲಹೊಂಗಲ 19: ಸಾಲಬಾಧೆ ತಾಳಲಾರದೇ ರೈತನೋರ್ವನು ಹೊಲದಲ್ಲಿ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮರಡಿನಾಗಲಾಪೂರ ಗ್ರಾಮದ ಹದ್ದಿಯಲ್ಲಿ ಶುಕ್ರವಾರ ಜರುಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಚನ್ನಬಸಪ್ಪ ಬಾಳಪ್ಪ ಕುರಿ (45) ಎಂದು ಗುರುತಿಸಲಾಗಿದೆ. ಮೃತ ರೈತನು ಒಂದು ಎಕರೆ ಜಮೀನು ಹೊಂದಿದ್ದು ಉಳಮೆಗಾಗಿ ಸಾಲ ಮಾಡಿದ್ದು ಬೆಳೆ ನಾಶವಾಗಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿದ್ದಾನೆ. ಮೃತರಿಗೆ ಪತ್ನಿ, ನಾಲ್ಕು ಜನ ಹೆಣ್ಣು ಮಕ್ಕಳು ಇದ್ದಾರೆ. ಪ್ರಕರಣ ಬೈಲಹೊಂಗಲ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.