ರೈತ ಅಭಿವೃದ್ಧಿ ಪೆನಲ್ ಅಭ್ಯರ್ಥಿಗಳು ಭಾರೀ ಬಹುತದಿಂದ ಆಯ್ಕೆ
ಅಥಣಿ 14: ಗುಂಡೇವಾಡಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಮಾರ್ಗದರ್ಶನದ ರೈತ ಆಭಿವೃದ್ಧಿ ಪೆನಲ್ ಎಲ್ಲ 12 ಅಭ್ಯರ್ಥಿಗಳು ಭಾರೀ ಬಹುತದಿಂದ ಆಯ್ಕೆಯಾಗಿದ್ದಾರೆ.
ಚುನಾವಣೆಯ ನೇತೃತ್ವ ವಹಿಸಿದ್ದ ಶಿವಾನಂದ ಗೊಲಭಾವಿ ಮಾತನಾಡಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಮಾರ್ಗದರ್ಶನದಲ್ಲಿ ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ರೈತ ಅಭಿವೃದ್ಧಿ ಪೆನಲ್ ನ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ರೈತ ಮತದಾರರು ನಮ್ಮ ಮೇಲೆ ವಿಶ್ವಾಸ ಇಟ್ಟು ಮತ ಚಲಾವಣೆ ಮಾಡಿದ್ದರಿಂದಲೇ ನಾವೆಲ್ಲ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದ ಅವರು ಸಹಕಾರ ಸಂಘದ ಮೂಲಕ ರೈತ ಸದಸ್ಯರಿಗೆ ಮೂರುವರೆ ಕೋಟಿ ರೂ.ಗಳನ್ನು ಝೀರೋ ಬಡ್ಡಿ ದರದಲ್ಲಿ ಸಾಲ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಮುಂದಿನ ಅವಧಿಯಲ್ಲಿಯೂ ಸಹ ಸಹಕಾರ ಸಂಘದ ಮೂಲಕ ರೈತರಿಗೆ ಝೀರೋ ಬಡ್ಡಿ ದರ ಸಹಿತ ಇನ್ನೂ ಅನೇಕ ಸಾಲದ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ ಅವರು ಮತದಾರರು ನಮ್ಮ ಮೇಲೆ ವಿಶ್ವಾಸ ಇಟ್ಟು ಮತ ಚಲಾಯಿಸಿದ್ದು, ಎಲ್ಲ ಮತದಾರ ಬಂಧುಗಳನ್ನು ಶಿವಾನಂದ ಗೊಲಭಾವಿ ಅಭಿನಂದಿಸಿದರು.
ಚುನಾವಣೆಯಲ್ಲಿ ಗೆದ್ದ ನಂತರ ಗೆದ್ದ ಅಭ್ಯರ್ಥಿಗಳ ಸಾವಿರಾರು ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ, ಘೋಷಣೆ ಕೂಗಿ ವಿಜಯೋತ್ಸವದಲ್ಲಿ ಸಂಭ್ರಮಿಸಿದರು. ಧುರೀಣ ಘೂಳಪ್ಪ ಜತ್ತಿ, ಕುಮಾರಗೌಡ ಪಾಟೀಲ, ಅಬಾಸಾಹೇಬ ಚವ್ಹಾಣ, ವಿಶ್ವನಾಥ ಪಾಟೀಲ, ನಾಗಪ್ಪಾ ಜತ್ತಿ, ರವಿ ಕಾಂಬಳೆ, ಮಲ್ಲಿಕಾರ್ಜುನ ಗುಂಜಿಗಾಂವಿ, ಅಣ್ಣಾಸಾಹೇಬ ಪಾಟೀಲ, ಡಾ.ಕರೆಪ್ಪ ಮಂಟೂರ, ಮಹಾಂತೇಶ ಹಿರೇಮಠ, ಶ್ರೀಮಂತ ವೀರ, ಸಂಗಪ್ಪಾ ಗೆಜ್ಜಿ, ನಾನಾಸಾಹೇಬ ಪಾಟೀಲ, ಚನ್ನಪ್ಪ ನಂದಿವಾಲೆ, ಪಾಪಾಚಂದ ಬಣಜವಾಡ, ಸಚೀನ ವೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ರಾಘವೇಂದ್ರ ನೂಲಿ, ಸಹಾಯಕರಾಗಿ ಸಂಘದ ಕಾರ್ಯದರ್ಶಿ ಕಾಶಿನಾಥ ಕವಟೇಕರ ಕಾರ್ಯನಿರ್ವಹಿಸಿದರು.