ಅಧಿಕಾರಿ ಸುಲೋಚನಾಗೆ ಬೀಳ್ಕೊಡುಗೆ
ಇಂಡಿ 08: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶುಶ್ರೂಷಕ ಅಧಿಕಾರಿ ಸುಲೋಚನಾ ಹೂಗಾರ ಅವರಿಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯ, ಸಿಬ್ಬಂದಿಗಳು ಸತ್ಕರಿಸಿ ಸೋಮವಾರ ಬೀಳ್ಕೊಟ್ಟರು.
ಡಾ.ರಾಜೇಶ ಕೋಳೆಕರ್, ಡಾ.ಪ್ರೀತಿ ಕೋಳೆಕರ್, ಡಾ.ರಮೇಶ ರಾಠೋಡ, ಡಾ. ಅನೀಲ ವಾಲಿ, ಡಾ. ಪ್ರವೀಣ ರಾಠೋಡ, ಡಾ. ಜಗದೀಶ ಬಿರಾದಾರ, ಡಾ. ಅಮಿತ್ ಕೊಳೆಕರ್, ಅಕ್ಷತಾ ಧನಶ್ರೀ, ಮಾತನಾಡಿ ವೈದ್ಯಕೀಯ ಇಲಾಖೆಯಲ್ಲಿ ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತಿ ಹೊಂದಿದ ಸುಲೋಚನಾ ಹೂಗಾರ ಅವರ ಕಾರ್ಯ ಶ್ಲಾಘನೀಯ. ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಸಹಿತ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸ ಸಾವಿರಾರು ಗರ್ಭಿಣಿ ಮಹಿಳೆಯರ ಹೆರಿಗೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಸೇವೆಯಲ್ಲೇ ಭಗವಂತನನ್ನು ಕಾಣತ್ತಿದ್ದರು ಎಂದು ಮಾರ್ಮಿಕವಾಗಿ ಮಾತನಾಡಿದರು.
ಸನ್ಮಾನ ಸಮಾರಂಭದಲ್ಲಿ ತಾರಾ ದೊಡ್ಡಮನಿ, ವಿಜಯಾದೇವಿ ಹಾದಿಮನಿ, ವಿಜಯಲಕ್ಷ್ಮೀ ಬಿರಾದಾರ, ಲಲಿತಾ ಅಂಗಡಿ, ನಾಝಿಯಾ ಕಾಖಂಡಕಿ, ತಹಸೀನ್ ಮೋಮಿನ್, ರೇಣುಕಾ ಬಡಿಗೇರ, ಆಲಿಯಾ ಸೇಖ್, ವಿ.ಆಯ್. ಬಡಿಗೇರ, ಕೆ.ವಿ., ದಶವಂತ, ವಿಜಯಕುಮಾರ ಪೋಳ, ಮಂಜುನಾಥ ಮಠ, ಅಶೋಕ, ಸುರೇಶ ಧನ್ಯಾಳ, ರವಿ ಹಾದಿಮನಿ, ರವಿ ಮಾದರ ಮತ್ತಿತರರು ಇದ್ದರು.