ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿ ಗಮನ ಸೆಳೆದ ಫಕೀರಪುರ
ಬೈಲಹೊಂಗಲ 14: ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅವರು ಬುಧವಾರ ತಾಲೂಕಿನ ನೇಗಿನಹಾಳ ಗ್ರಾಮದಿಂದ ಬೈಲಹೊಂಗಲಕ್ಕೆ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಬೆಳೆಸಿ ಎಲ್ಲರ ಗಮನ ಸೆಳೆದರು.
ಬಸ್ ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯಿಂದಾಗಿ ಆಗುತ್ತಿರುವ ತೊಂದರೆ ಕುರಿತು ಪರೀಶಿಲಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಚರಿಸುವದರಿಂದ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹೆಚ್ಚಿನ ಬಸ್ ಗಳನ್ನು ಓಡಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು.ಬಸ್ ನ್ನು ಶುಚಿಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಸ್ ನಲ್ಲಿ ಸಂಚರಿಸುವ ಮಹಿಳೆಯರು ಸರ್ಕಾರದ ಮಹತ್ತರ ಯೋಜನೆಗೆ ಉಪವಿಭಾಗಾಧಿಕಾರಿ ಎದುರು ಪ್ರಶಂಸೆ ವ್ಯಕ್ತಪಡಿಸಿದರು. ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಎನೇ ಸಮಸ್ಯೆ ಆದರೂ ತಿಳಿಸಬೇಕೆಂದು ತಮ್ಮ ವೈಯುಕ್ತಿಕ ಮೊಬೈಲ ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದರು. ಸಾಣಿಕೊಪ್ಪ ಗ್ರಾಮದಲ್ಲಿ 60 ಕ್ಕಿಂತ ಹೆಚ್ಚು ವಯಸ್ಸಾದ ಪುರುಷರಿಗೆ ಸಿನಿಯರ ಸಿಟಿಜನ್ ಕಾರ್ಡ ಸಿಕ್ಕಿಲ್ಲ, ಸಾರಿಗೆ ಅಧಿಕಾರಿಗಳು ಇವರಿಗೆ ತುರ್ತಾಗಿ ಒದಗಿಸಲು ಸೂಚಿಸಲಾಯಿತು.