ಶೈಕ್ಷಣಿಕ ಅಭಿವೃದ್ಧಿಗೆ ಸೌಲಭ್ಯಗಳನ್ನು ಸಂಸ್ಥೆಯ ನಿರ್ದೇಶಕರ ಸಹಾಯದೊಂದಿಗೆ ಪೂರೈಸಲು ಸಾಧ್ಯ: ಬಗಲಿ
ಇಂಡಿ04: ಶಾಲಾ ಮಕ್ಕಳ ಫಲಿತಾಂಶ ವೃದ್ಧಿಗಾಗಿ “ಬಾಲಕ-ಪಾಲಕ-ಚಾಲಕ” ಅಂದರೆ, ವಿದ್ಯಾರ್ಥಿನಿಯರು, ಪಾಲಕರು ಹಾಗೂ ಶಿಕ್ಷಕರು ಕೂಡಿಕೊಂಡು ಪವಿತ್ರ ಶಿಕ್ಷಕ ವೃತ್ತಿಯನ್ನು ಶ್ರದ್ಧೆಯಿಂದ ಮೈಗೂಡಿಸಿಕೊಂಡರೆ ಭವಿಷ್ಯದ ಸತ್ಪ್ರಜೆಗಳ ನಿರ್ಮಾಣ -ವಾಗುವುದರಲ್ಲಿ ಸಂದೇಹವಿಲ್ಲವೆಂದರು. ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಇನ್ನೂ ಅನೇಕ ಸೌಲಭ್ಯಗಳನ್ನು ಸಂಸ್ಥೆಯ ನಿರ್ದೇಶಕರ ಸಹಾಯದೊಂದಿಗೆ ಪೂರೈಸಲು ಸಾಧ್ಯವಿದೆಯೆಂದರು ಸಭೆಯನ್ನದ್ದೇಶಿಸಿ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ ಮಾತನಾಡಿದರು.
ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ಸೌ.ಅ.ಗು. ಗಾಂಧಿ ಬಾಲಕಿಯರ ಪ್ರೌಢಶಾಲೆ ಇಂಡಿಯಲ್ಲಿ ಮಂಗಳವಾರ ಪಾಲಕರ ಸಭೆ ಆಯೋಜಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ ಮಾತನಾಡಿ ಶಾಲೆಯ ದೈನಂದಿನ ಚಟುವಟಿಕೆಗಳ ಜೊತೆ ಜೊತೆಗೆ ಶಾಲೆಯಲ್ಲಿ ರಸಪ್ರಶ್ನೆ, ಗುಂಪುಚರ್ಚೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ ಕಾರ್ಯಕ್ರಮ, ಗಣಿತ, ಕನ್ನಡ, ಇಂಗ್ಲೀಷ್ ವಿಷಯ ವಿಶೇಷ ಕಾರ್ಯಗಾರಗಳು ಹಾಗೂ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಭಯ ಹೋಗಲಾಡಿಸುವುದು ಮತ್ತು ವ್ಯಕ್ತಿತ್ವ ವಿಕಸನ ಕುರಿತು ವಿಜಯಪುರದ ವಿಜಡಂ ತರಬೇತಿ ಕೇಂದ್ರದವರಿಂದ ವಿಶೇಷ ಕಾರ್ಯಗಾರ ಹಮ್ಮಿಕೊಂಡು ವಿದ್ಯಾರ್ಥಿನಿಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಲೆಯ ಬೋಧಕ ಸಿಬ್ಬಂದಿಯವರು ಸೃಜನಾತ್ಮಕ ಬೋಧನೆೆಯಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನಮ್ಮ ಸಂಸ್ಥೆಯ ಆಡಳಿತ ಮಂಡಳಿಯವರು ನೀಡುತ್ತಿದ್ದಾರೆ. ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.
ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ನಿರ್ದೇಶಕರಾದ ಚಂದ್ರಕಾಂತ ದೇವರ, ಹಾಗೂ ಪಾಲಕರು, ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಎಚ್.ಬಿ.ಕೃಷ್ಣರವರು ಕಾರ್ಯಕ್ರಮ ನಿರೂಪಿಸಿದರು.