ಬೈಲಹೊಂಗಲ

ಕಲಾ ಸಂಸ್ಕೃತಿಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಿ: ವಿಜಯಾನಂದಶ್ರೀ

ಕಲಾ ಸಂಸ್ಕೃತಿಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಿ: ವಿಜಯಾನಂದಶ್ರೀ

ಬೈಲಹೊಂಗಲ 12: ನಾಡಿನ ಪರಂಪರೆ ಪ್ರತಿಬಿಂಬಿಸುವ ಕಲಾ ಸಂಸ್ಕೃತಿಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕೆಂದು ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿ ಹೇಳಿದರು.  

ಅವರು ತಾಲೂಕಿನ ಬೇವಿನಕೊಪ್ಪ ಗ್ರಾಮದ ಆನಂದಾಶ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ ಹಾಗೂ ಶಿಗ್ಗಾಂವ ತಾಲೂಕಿನ ಚಿಕ್ಕಮಣಕಟ್ಟಿಯ ಶ್ರೀಜೋಡಿ ಬಸವೇಶ್ವರ ಜಾನಪದ ಕಲಾ ತಂಡ ಇವರ ಆಶ್ರಯದಲ್ಲಿ  ನಡೆದ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಭಾರತ ವೈವಿಧ್ಯಮಯ ರಾಷ್ಟ್ರವಾಗಿದ್ದರಿಂದ ಹಲವಾರು ಜನಪದ ಕಲೆಗಳನ್ನು ಕಾಣಬಹುದಾಗಿದ್ದು ಯುವ ಜನಾಂಗ ಹೆಚ್ಚಿನ ಆದ್ಯತೆ ನೀಡಬೇಕೆಂದರು. 

ಯೋಜನೆಯ ಜಿಲ್ಲಾ ನಿರ್ಧೇಶಕ ಸತೀಶ ನಾಯ್ಕ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಾಟಕಗಳು ಮನುಷ್ಯನ ಮನಸ್ಸನ್ನು ಸಂಭ್ರಮಗೊಳಿಸಲಿದ್ದು ಪ್ರತಿಭೆ ಅನಾವರಣಕ್ಕೆ ಇಂಬು ನೀಡಬೇಕೆಂದರು. 

ತಾಲೂಕಾ ಯೋಜನಾಧಿಕಾರಿ ವಿಜಯಕುಮಾರ ಎಂ, ಒಕ್ಕೂಟದ ಅಧ್ಯಕ್ಷ ಸೀತಮ್ಮ ಹೆಸರನ್ನವರ, ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷ್ಯೆ ಕಸ್ತೂರಿ ಬಾರ್ಕಿ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಶ್ರೀ ಜೋಡಿ ಬಸವೇಶ್ವರ ಜಾನಪದ ಕಲಾ ತಂಡದ ಅಧ್ಯಕ್ಷ ಬಸವರಾಜ ಕರಡಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೈಲಾ ಜಕ್ಕನ್ನವರ, ವಲಯ ಮೇಲ್ವಚಾರಕ ಮಹಾಂತೇಶ ಕಾಟಿ, ಸುವರ್ಣ ಉರಬಿನ, ಆರುಂಧತಿ ಆರೇರ ಹಾಗೂ ಕಲಾ ತಂಡದ ಸದಸ್ಯರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.  

ಸೇವಾ ಪ್ರತಿನಿಧಿ ಐಶ್ವರ್ಯ ಚಿನಿವಾಲರ ಸ್ವಾಗತಿಸಿದರು. ಗಿರಿಜಾ ಬೇವಿನಗಿಡದ ನಿರೂಪಿಸಿದರು. ಸವಿತಾ ಗೋತಮಾರ ವಂದಿಸಿದರು.  

ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ, ನೀರು ನೈರ್ಮಲ್ಯ, ಶೌಚಾಲಯ ಬಳಕೆ, ಸಮುದಾಯ ಆರೋಗ್ಯ ಸೇರಿದಂತೆ ಹಲವಾರು ವಿಷಯಗಳ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು. 


ಸುದ್ದಿ ಓದಿ