ಕಿತ್ತೂರು ಭಾಗಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆ
ಅಥಣಿ 1; ಸರಕಾರಕ್ಕೆ ಶಾಸಕ ಸವದಿ ಆಗ್ರಹಉತ್ತರ ಕರ್ನಾಟಕ ತಾರತಮ್ಯ ಹಿನ್ನಲೆಯಲ್ಲಿ ಪ್ರತ್ಯೆಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಅದಕ್ಕೆ ಈ ಭಾಗದ ಯಾರ ಸಹ ಮತ ಇಲ್ಲ ಅಖಂಡ ಕರ್ನಾಟಕವೇ ಇರಲಿ ಅನ್ನುವದು ನಮ್ಮೆಲ್ಲರ ಆಶಯ ಆದರೆ ಸಮಗ್ರ ಅಭಿವೃದ್ದಿಗಾಗಿ ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಪ್ರತ್ಯೆಕ ಅಭಿವೃದ್ದಿ ಮಂಡಳಿ ಸ್ಥಾಪನೆ ಮಾಡಿ 5 ಸಾವಿರ ಕೋಟಿ ರೂ.ಗಳ ಅನುದಾನ ನೀಡಿ ಹಿಂದೂಳಿದ ಈ ಭಾಗಕ್ಕೆ ಸರ್ವಾಂಗೀಣ ಅಭಿವೃದ್ದಿ ಮಾಡಿದಾಗ ಮಾತ್ರ ಪ್ರತ್ಯೆಕ ರಾಜ್ಯದ ಕೂಗನ್ನು ಸದೆಬಡಿಯಲು ಸಾದ್ಯ ಎಂದು ಶಾಸಕ ಸವದಿ ಹೇಳಿದರು.
ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನಾಡ ದೇವಿ ಪೂಜೆ ಸಲ್ಲಿಸಿ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಶಾಸಕ ಸವದಿ ಕರ್ನಾಟಕ ಏಕಿಕರಣ ಮಾಡಲು ದುಡಿದ ಮಹನಿಯರಿಗೆ ನಮನ ಸಲ್ಲಿಸಿದ ಕರ್ನಾಟಕ ಎಂದು ನಾಮಕರಣ ಮಾಡಲು ದೇವರಾಜ ಅರಸು ಅವರಿಗೆ ಅಭಿನಂದನೆ ಸಲ್ಲಿಸಿದರು. ನಂತರ ಅಭಿವೃದ್ದಿಯಲ್ಲಿ ತಾರತಮ್ಯೆವಾಗುತ್ತಿರುವ ಹಿನ್ನಲೆಯಲ್ಲಿ ಉತ್ತರ ಕರ್ನಾಟವನ್ನು ಪತ್ಯೆಕ ರಾಜ್ಯ ಕೂಗು ಕೇಳಿ ಬರುತ್ತಿದೆ ಆದರೆ ಅದಕ್ಕೆ ನಾವು ಯಾರು ಸಹ ಅಂತಹ ವಿಚಾರಗಳಿಗೆ ಕೈ ಜೊಡಿಸಬಾರದ ಎಂದು ಮನವಿ ಮಾಡಿದರು. ಉತ್ತರ ಕರ್ನಾಟಕದ ಅಭಿವೃದ್ದಿಯಲ್ಲಿ ತಾರತಮ್ಯೆ ಹೋಗಲಾಡಿಸಲು ಕಿತ್ತೂರು ಕರ್ನಾಟಕ ಭಾಗಕ್ಕೆ ವಿಶೇಷ ಅಭಿವೃದ್ದಿ ಮಂಡಳಿಯನ್ನು ಸ್ಥಾಪನೆ ಮಾಡಲು ಸರಕಾರಕ್ಕೆ ನಾನು ಮನವಿ ಮಾಡುತ್ತೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಡುವ ಅನುದಾನದಂತೆ ಈ ಭಾಗಕ್ಕೂ 5 ಸಾವಿರ ಕೋಟಿ ರೂಗಳ ಅನುದಾನವನ್ನು ನೀಡಿ ಸಮಗ್ರ ಅಭಿವೃದ್ದಿಗೆ ನಾಂದಿ ಹಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿಗಳಿಂದ ಅರ್ಥಿಕ ಸ್ಥಿತಿಗತಿ ವ್ಯತ್ಯಾಸ ಆಗಿರಬಹುದು ಆದರೆ ಅಥಣಿ ಮತಕ್ಷೇತ್ರಕ್ಕೆ ಈಗಾಗಲೇ 1500 ಕೋಟಿ ರೂ.ಗಳ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಾರಂಭವಾಗಿದ್ದು ಇನ್ನು 18 ತಿಂಗಳಲ್ಲಿ ಕಾಮಗಾರಿ ಮುಗಿಸಿ ರೈತರಿಗೆ ನೀರು ಒದಗಿಸಲಾಗುವದು. ಪ್ರಮುಖವಾಗಿ ಇನ್ನೂ 15 ದಿನಗಳಒಳಗಾಗಿ ಪಶು ವೈದ್ಯಕೀಯ ಕಾಲೇಜು ಪ್ರವೇಶ ಪ್ರಾರಂಭಿಸಿ ರೈತರ ಮಕ್ಕಳು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಾರೆ ಅಥಣಿ ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ದಿ ಮಾಡುವದು ನನ್ನ ಗುರಿಯಾಗಿದೆ ಎಂದು ಹೇಳಿದರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಜನ ಸಾಧಕರನ್ನು ಗುರುತಿಸಿ 2024ನೇ 69 ನೇ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಅಥಣಿ ತಾಲೂಕು ವಿಜಯ ಕರ್ನಾಟಕ ವರದಿಗಾರ ಶಿವಕುಮಾರ ಅಪರಾಜ ಅವರಿಗೆ ಪತ್ರಿಕಾ ರಂಗದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನಿ ನೀಡಿ ಸತ್ಕರಿಸಿದರು.
ವಿವಿಧ ಶಾಲೆಗಳು ರೂಪಕಗಳನ್ನು ಪ್ರದರ್ಶನ ಮಾಡಿದರು, ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾದ್ಯಕ್ಷೆ ಭುವನೇಶ್ವರಿ ಯಂಕಂಚಿ ಸದಸ್ಯರಾದ ಸಂತೋಷ ಸಾವಡಕರ, ರಾಜೂ ಗೂಡೊಡಗಿ, ದತ್ತಾ ವಾಸ್ಟರ, ಮೃಣಾಲಿನಿ ದೇಶಪಾಂಡೆ ಸೇರಿ ಎಲ್ಲ 27 ಜನ ಸದಸ್ಯರು, ಅಥಣಿ ತಹಶೀಲ್ದಾರ ಸಿದ್ರಾಯ ಭೋಸಗಿ, ಉಪತಹಶಿಲ್ದಾರ ಮಹಾದೇವ ಬಿರಾದಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಬಿಇಓ ಎಂ ಬಿ ಮೊಟರಗಿ, ಪುರಸಭೆ ಮಖ್ಯಾಧಿಕಾರಿ ಅಶೋಕ ಗುಡಿಮನಿ, ಪಂಚಾಯತ ರಾಜ್ ಇಂಜಿನಿಯರ ಈರಣ್ಣ ವಾಲಿ,ಡಿವೈಎಸ್ಪಿ ಮುನ್ನೋಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಕಣಶೇಟ್ಟಿ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಎ ಆರ್ ಪಾಟೀಲ, ರಾಮನಗೌಡ ಪಾಟೀಲ, ಕರವೇ ಅಧ್ಯಕ್ಷ ಶಬ್ಬೀರ ಸಾತಬಚ್ಚೆ, ರವಿ ಪೂಜಾರಿ, ವಿಠ್ಠಲ ಪೂಜಾರಿ, ಮಂಜೂ ಹೋಳಿಕಟ್ಟಿ, ಮಹಾಂತೇಶ ಬಾಡಗಿ, ಸುಂದರ ಸೌದಾಗರ, ಸಂಗಮೇಶ ಹಚಡದ, ಮಲ್ಲಿಕಾರ್ಜುನ ಮಿರ್ಜಿ,ಸಿದಗೌಡ ಹಿಪ್ಪರಗಿ ಬಿ ಎಸ್ ಮೇಣಸಂಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.