ಪ್ರತಿ ಗ್ರಾಮ ಪಂಚಾಯತಿಗೆ ಒಂದು ಗೋಶಾಲೆ ಆರಂಭಿಸಿ
ಲೋಕದರ್ಶನ ವರದಿ
ಇಂಡಿ 24: ಪ್ರಸಕ್ತ ಸಾಲಿನ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪ್ರತಿ ಜೋಡೆತ್ತಿಗೆ ?11 ಸಾವಿರ ಪ್ರೋತ್ಸಾಹಧನ ನೀಡಬೇಕು ಹಾಗೂ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ ಒಂದು ಗೋಶಾಲೆ ಆರಂಭಿಸಬೇಕು ಎಂದು ಆಗ್ರಹಿಸಿ, ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರ ನೇತೃತ್ವದಲ್ಲಿ ನವೆಂಬರ್ 23ರಂದು ಹಂಜಗಿ, ಹೊರ್ತಿ, ಕೋಳೂರಗಿ ಮತ್ತು ನಿಂಬಾಳ ಗ್ರಾಮದ ರೈತರು ಇಂಡಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಶಿರಸ್ತೇದಾರ್ ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.ಬರಗಾಲದಿಂದ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಾನುವಾರುಗಳನ್ನು ಸಾಕುವುದು ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ಪ್ರತಿ ಜೋಡೆತ್ತಿಗೆ ?11 ಸಾವಿರ ಪ್ರೋತ್ಸಾಹಧನ ನೀಡಿ ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜೋಡೆತ್ತುಗಳ ಸಂರಕ್ಷಣೆಗಾಗಿ ರೈತರಿಗೆ ಪ್ರತಿ ತಿಂಗಳು ?10 ಸಾವಿರ ನೆರವು ನೀಡುತ್ತಿದ್ದುದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.ಅಲ್ಲದೆ, ಬರಗಾಲದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಬರಪರಿಹಾರ ಘೋಷಿಸಬೇಕು. ಜಾನುವಾರುಗಳ ರಕ್ಷಣೆಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ ಒಂದು ಗೋಶಾಲೆ ಆರಂಭಿಸಬೇಕು.
ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಉಚಿತ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬರಗಾಲದ ಸಂದರ್ಭದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶ್ರೀಶೈಲ ಶಿವೂರ, ಸಿದ್ದು ಡಂಗಾ, ಅನೀಲ ಜಾದವ್, ಅಲ್ಲಾಸಾಹೇಬ ಸೈಯದ್, ಶಾಹಜಸಾಬ ಸೈಯದ್, ಭೀಮರಾಯ ಹಳ್ಳಿ, ಮಾರುತಿ ಹರಿಜನ, ಲಕ್ಕಪ್ಪ ಹೂಗಾರ, ಯಶವಂತ ಕಾಡೆಗೋಳ, ಮಲ್ಲು ಮಿಂಚನಾಳ, ಇಬ್ರಾಹಿಂ ಕುಣಬಿ, ಮಾಳಪ್ಪ ಮಿಂಚನಾಳ, ಅಲ್ಲಾಭಕ್ಷ ಸಯ್ಯದ್, ಬಾಸೇಸಾಬ ಸೈಯದ