ಶಿಕ್ಷಣ ಕ್ಷೇತ್ರದಲ್ಲಿ ಮುನ್ನುಡಿ ಬರೆಯುತ್ತಿರುವ ಆಪಲ್ ಇಂಟರ್ನ್ಯಾಷನಲ್ ಸ್ಕೂಲ್
ಲೋಕದರ್ಶನ ವರದಿ
ಇಂಡಿ 21 : ನಗರದ ಶೈಕ್ಷಣಿಕ ವಲಯದಲ್ಲಿ ಅತ್ಯಾಧುನಿಕತೆ ಮತ್ತು ನೂತನ ಕಲಿಕಾ ವಿಧಾನಗಳ ಮೂಲಕ ಗಮನ ಸೆಳೆಯುತ್ತಿರುವ ’ಆಪಲ್ ಇಂಟರ್ನ್ಯಾಷನಲ್ ಸ್ಕೂಲ್’ ಗುಣಮಟ್ಟದ ಶಿಕ್ಷಣದ ಹೊಸ ಮಾನದಂಡವನ್ನು ಸೃಷ್ಟಿಸಿದೆ. ಸಾಂಪ್ರದಾಯಿಕ ಬೋಧನಾ ಪದ್ಧತಿಯಿಂದ ಹೊರಬಂದು, ಸಂಪೂರ್ಣವಾಗಿ ಚಟುವಟಿಕೆ ಮತ್ತು ಅನುಭವ ಆಧಾರಿತ ಶಿಕ್ಷಣವನ್ನು ನೀಡುತ್ತಿರುವ ನಗರದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ.
ಅಂತಾರಾಷ್ಟ್ರಿಯ ಮಟ್ಟದ ಪಾಲುದಾರಿಕೆ ಮತ್ತು ಭವಿಷ್ಯದ ಶಿಕ್ಷಣ ಈ ಶಾಲೆಯು ವಿಶ್ವಪ್ರಸಿದ್ಧ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆಜ್ಞಾನಾತ್ಮಕ ಪಾಲುದಾರಿಕೆಯನ್ನು ಹೊಂದಿದೆ. ಇದರ ಅಡಿಯಲ್ಲಿ ಶಿಕ್ಷಕರಿಗೆ ನಿರಂತರ ಬೋಧನಾ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬರಲಿರುವ ಆಧುನಿಕ ಬದಲಾವಣೆಗಳನ್ನು ಮುಂಚಿತವಾಗಿಯೇ ಅಳವಡಿಸಿಕೊಳ್ಳಲಾಗುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಲ್ಲಿ ಒತ್ತು ನೀಡಲಾಗುತ್ತಿದೆ.
ಆಟ, ಪಾಠದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಲಾಗುತ್ತದೆ. ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ವಾತಾವರಣವಿದ್ದು, ಸಾಮಾಜಿಕ ಮತ್ತು ಧಾರ್ಮಿಕ ಸಮಾನತೆಯೊಂದಿಗೆ ಸಹೋದರತ್ವ ಭಾವನೆಯನ್ನು ಬೆಳೆಸಲಾಗುತ್ತಿದೆ. ಎಲ್ಲಾ ಹಬ್ಬ-ಹರಿದಿನಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಾಗಿ ಸಂಭ್ರಮದಿಂದ ಆಚರಿಸುವ ಮೂಲಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪ್ರಶಾಂತ ಹಾಗೂ ಸುಂದರ ನಿಸರ್ಗದ ಮಡಿಲಿನಲ್ಲಿ ಈ ಶಾಲೆ ತಲೆ ಎತ್ತಿದೆ. ಶಾಲೆಯ ಪ್ರಮುಖ ಸೌಲಭ್ಯಗಳು ಹೀಗಿವೆ:ವಿಶಾಲವಾದ ತರಗತಿ ಕೊಠಡಿಗಳು ಮತ್ತು ಸುಸಜ್ಜಿತ ಆಟದ ಮೈದಾನ.ಪರಿಸರ ಪ್ರಜ್ಞೆ ಮೂಡಿಸುವ ಸುಂದರ ಶಾಲಾ ಕೈತೋಟ.ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಉತ್ತಮ ಸಾರಿಗೆ ಸೇವೆ.ಶುದ್ಧ ಕುಡಿಯುವ ನೀರು, ಪೌಷ್ಟಿಕ ಊಟದ ವ್ಯವಸ್ಥೆ ಹಾಗೂ ಸ್ವಚ್ಛ ಶೌಚಾಲಯಗಳು.
ನಿರಂತರ ಬೋಧನೆ ಮತ್ತು ಕಲಿಕೆಯಲ್ಲಿ ಹಿಂದುಳಿದ ಅಥವಾ ವಿಶೇಷ ಆಸಕ್ತಿ ಇರುವ ಮಕ್ಕಳಿಗಾಗಿ ವಿಶೇಷ ತರಗತಿಗಳು.ಒಟ್ಟಾರೆಯಾಗಿ, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಮಕ್ಕಳಿಗೆ ಜಾಗತಿಕ ಮಟ್ಟದ ಶಿಕ್ಷಣವನ್ನು ಸ್ಥಳೀಯವಾಗಿಯೇ ಒದಗಿಸುವ ಮೂಲಕ ಆಪಲ್ ಇಂಟರ್ನ್ಯಾಷನಲ್ ಸ್ಕೂಲ್ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.