ಇಂಡಿ

ಇಂಡಿ ನಗರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ಪರಿಹಾರ ವಿಳಂಬ ಖಂಡಿಸಿ ಮನವಿ

ಇಂಡಿ ನಗರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ಪರಿಹಾರ ವಿಳಂಬ ಖಂಡಿಸಿ ಮನವಿ
Memorandum submitted protesting the drinking water problem in Indi town and the delay in drought rel


ಲೋಕದರ್ಶನ ವರದಿ  

           ಇಂಡಿ 16 :  ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಕಳೆದ ಎರಡು ತಿಂಗಳಿಂದ 24ಸ7 ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಆದರೂ ನಗರಸಭೆ ಹಾಗೂ ಸ್ಥಳೀಯ ಶಾಸಕರು ಸಮಸ್ಯೆ ಪರಿಹರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಉಪವಿಭಾಗಾಧಿಕಾರಿಗಳ ಪರವಾಗಿ ಗ್ರೇಡ್‌-2 ಅಧಿಕಾರಿ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

           ಅದೇ ರೀತಿ, ಬರಗಾಲ ಘೋಷಣೆಯಾಗಿ ಸುಮಾರು ಮೂರು ತಿಂಗಳು ಕಳೆದರೂ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ಈ ಎರಡೂ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಅಯೂಬ್ ನಾಟೀಕರ್, ಮುಂದಿನ ದಿನಗಳಲ್ಲಿ ಇಂಡಿ ನಗರಕ್ಕೆ ಸಮರ​‍್ಕ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ.

            ನಗರ ಬಂದ್ ಮಾಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಿದ್ದು ಡಂಗಾ, ಶಿವಾನಂದ ಅಂಗಡಿ, ದುಂಡು ಬಿರಾದಾರ, ಬಸವರಾಜ ನಾವಿ,ನಿಯಾಜ್ ಅಗರಖೇಡ, ಇರ್ಫಾನ್ ಅಗರಖೇಡ, ಫಜಲು ಮುಲ್ಲಾ, ಸದ್ದಾಂ ಕೋಟ್ನಾಳ, ಸುದರ್ಶನ ಉಪಾಧ್ಯಾಯ, ರಮೇಶ ರಾಠೋಡ, ಬಾಗೇಶ ನಾವಿ, ಲಕ್ಕಪ್ಪ , ಹೂಗಾರ,ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ