ಶಿಕ್ಷಕ ರತ್ನ ರಾಜ್ಯೋತ್ಸವ ಪ್ರಶಸ್ತಿಗೆ: ಸಿದ್ದು ಕಪ್ಪೆನವರ ಆಯ್ಕೆ
ಲೋಕದರ್ಶನ ವರದಿ
ಇಂಡಿ 14: ತಾಲ್ಲೂಕಿನ ಬೋಳೆಗಾಂವ ಗ್ರಾಮದವರಾದ ಶಿಕ್ಷಕ ಶ್ರೀ ಸಿದ್ಧರಾಮು. ಎಸ್. ಕಪ್ಪೈನವರಿಗೆ ’ಶಿಕ್ಷಕ ರತ್ನ ರಾಜ್ಯೋತ್ಸವ’ ಪ್ರಶಸ್ತಿ ಗರಿ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.ಪ್ರಸುತ್ತವಿಜಯಪುರದ ಎಲ್ ಇ ಎಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ಸಿದ್ಧರಾಮು. ಎಸ್. ಕಪ್ಪೆನವರು 2026-27 ನೇ ಸಾಲಿನ "ಶಿಕ್ಷಕ ರತ್ನ ರಾಜ್ಯೋತ್ಸವ" ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಧಾರವಾಡದ ಭುವನೇಶ್ವರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ಇವರ ಶೈಕ್ಷಣಿಕ ಸಾಧನೆ, ಪ್ರಾಮಾಣಿಕತೆ, ಸೇವಾ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗಳನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಿದೆ. ದಿ. 27 ಸಾಧನಕೇರಿಯಲ್ಲಿರುವ ಬೇಂದ್ರೆ ಭವನ, ಧಾರವಾಡಕನ್ನಡ ರಾಜ್ಯೋತ್ಸವದ ಅಂಗವಾಗಿ ಧಾರವಾಡದಲ್ಲಿ ಜರುಗಲಿರುವ ಅದ್ಧೂರಿ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಇವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷರಾದ ಪ್ರತಿಭಾ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರ ಈ ಸಾಧನೆಗೆ ಶಾಲೆಯ ಸಿಬ್ಬಂದಿ ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.