ಇಂಡಿ

ಡಿ 10 ಕ್ಕೆ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ: ಪಂಚಮಸಾಲಿ ಜಗದ್ಗುರುಗಳು

ಡಿ 10 ಕ್ಕೆ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ: ಪಂಚಮಸಾಲಿ ಜಗದ್ಗುರುಗಳು

             ಇಂಡಿ 14: ಪಂಚಮಸಾಲಿ ಸಮಾಜದ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಹಾಗೂ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಪ್ರತಿಭಟನಾಕಾರರ ಮೇಲೆ ನಡೆದಿರುವ ಲಾಠಿ ಚಾರ್ಜ್‌ ಘಟನೆಯನ್ನು ಖಂಡಿಸಿ ಇದೆ ದಿನಾಂಕ 10-12-2026 ರಂದು ಬೆಳಗಾವಿಯ ವಿಧಾನಸೌಧದ ಮುಂಭಾಗದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯನ್ನು ವಿರೋಧಿಸಿ ಹಾಗೂ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಸ್ವಾಮೀಜಿ ಕರೆ ನೀಡಿದ್ದಾರೆ.

            ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, "ಶಾಂತಿಯುತವಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದ ಸಮಾಜದ ಬಾಂಧವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಬೆಳಗಾವಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ. 

              ಈ ಸತ್ಯಾಗ್ರಹದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು, ಕಾರ್ಯಕರ್ತರು ಮತ್ತು ವಿವಿಧ ಜಿಲ್ಲೆಗಳ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸ್ವಾಮೀಜಿ ಮನವಿ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷರಾದ ವಿ ಎಚ್ ಬಿರಾದಾರ, ಹಾಗೂ ನೀಲಕಂಠಗೌಡ ಪಾಟೀಲ ಮಂಜುನಾಥ ಕಾಮಗೊಂಡು ಶರಣಗೌಡ ಬಂಡಿ ಶಿವಾನಂದ ಚಾಳಿಕಾರ ಶಿವಾನಂದ ದೇವರ ಬಾಳು ಮುಳಜಿ ಸೋಮಶೇಖರ ಬಿರಾದಾರ ಉಮೇಶ್ ಬಳಬಟ್ಟ ನಿಂಗನಗೌಡ ಬಿರಾದಾರ ಸಚೀನ ಇಂಡಿ ನಾಗೇಶ್ ಹೆಗಡ್ಯಾಳ ಪ್ರಕಾಶ್ ಬಿರಾದಾರ ಪ್ರಭು ಹೊಸಮನಿ  ಹಣಮಂತ ಹೊಟಗಿ ದಯಾನಂದ ಪಾಟೀಲ ಅನೀಲಗೌಡ ಬಿರಾದಾರ ರಮೇಶ ಬಿರಾದಾರ ಈರಣಗೌಡ ಬಿರಾದಾರ ಈರಣ್ಣ ಡಂಗಿ ಶ್ರೀಶೈಲ ಕೊರಳ್ಳಿ ಉಮೇಶ ಲಚ್ಯಾಣ ಶಂಕರ​‍್ಪ ಬೌರಾಮಣಿ ಸೋಮು ಬಿರಾದಾರ  ಚಿದಾನಂದ ಬಿರಾದಾರ ಅಣ್ಣಾರಾಯ ಆಳೂರ ಚಿದಾನಂದ ಬಿರಾದಾರ ಅಶೋಕ ಅಕಲಾದಿ ಮಂಜುನಾಥ ದೇವರ ಸಿದ್ದು ಮೇಣಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ