ಪ್ರಕಾಶ ಬಡಿಗೇರ ಬಸವ ಶ್ರೀ ಪ್ರಶಸ್ತಿ
ಲೋಕದರ್ಶನ ವರದಿ
ಇಂಡಿ 13: ರಾಜ್ಯಮಟ್ಟದ ಬಸವ ಶ್ರೀ ಪ್ರಶಸ್ತಿಗೆ ಭಾಜನರಾದ ಆದರ್ಶ ಶಿಕ್ಷಕ ಪ್ರಕಾಶ ಬಡಿಗೇರ ಅವರು ಧಾರವಾಡ ನಾಟ್ಯ ಸ್ಪೂರ್ತಿ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಧಾರವಾಡ ಇವರು 16 ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಸವ ಪ್ರಶಸ್ತಿಗೆ ಇಂಡಿ ತಾಲೂಕಿನ ಆದರ್ಶ ಶಿಕ್ಷಕರಾದ ಪ್ರಕಾಶ. ರಾ.ಬಡಿಗೇರ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕರು ಮತ್ತು ನೃತ್ಯ ನಿರ್ದೇಶಕರು ನಾಟ್ಯ ಸ್ಪೂರ್ತಿ ಆರ್ಟ್ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಎಸ್ ಭಂಗಣ್ಣನವರು ತಿಳಿಸಿದ್ದಾರೆ. ಈ ಪ್ರಶಸ್ತಿಯನ್ನು ಇದೇ ತಿಂಗಳ ದಿನಾಂಕ 15-11-2026 ರಂದು ರವಿವಾರ ಧಾರವಾಡದ ಸರಕಾರಿ ನೌಕರರ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗೌರವ ಪೂರ್ವಕವಾಗಿ ತಾವು ಕಾರ್ಯಕ್ರಮಕ್ಕೆ ಆಗಮಿಸಿ ರಾಜ್ಯಮಟ್ಟದ ಬಸವ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಬೇಕೆಂದು ಅವರು ತಿಳಿಸಿದ್ದಾರೆ.