ಇಂಡಿ

ಮಕ್ಕಳಲ್ಲಿ ದೇವರನ್ನು ಕಾಣಬಹುದು:ಅನೀತಾ ಬೋಸಗಿ

ಮಕ್ಕಳಲ್ಲಿ ದೇವರನ್ನು ಕಾಣಬಹುದು:ಅನೀತಾ ಬೋಸಗಿ


ಲೋಕದರ್ಶನ ವರದಿ  

            ಇಂಡಿ  14: ತಾಲ್ಲೂಕಿನ ಹೋರ್ತಿ ಶ್ರೀ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಅನೀತಾ ಬೋಸಗಿಯವರು ಮಾತನಾಡಿ ಮಕ್ಕಳೆ ದೇವರು ಮಕ್ಕಳಲ್ಲಿ ದೇವರನ್ನು ಕಾಣಬಹುದು,

              ಮಕ್ಕಳ ನಗುವೇ ನಾಳಿನ ಬದುಕು ಎಂಬ ಈ ಸುಂದರ ನುಡಿಯು ಜಗತ್ತಿನ ಅತ್ಯಂತ ಅಮೂಲ್ಯ ಮತ್ತು ಶುದ್ಧ ಸತ್ಯವನ್ನು ಪ್ರತಿಬಿಂಬಿಸುತ್ತದೆ ಮಗುವಿನ ಮುಗ್ಧ ನಗು ಕೇವಲ ಮುಖದ ಮೇಲಿನ ಭಾವನೆಯಲ್ಲ; ಅದು ಭವಿಷ್ಯದ ಭರವಸೆ, ನಾಳಿನ ಸುಂದರ ಲೋಕದ ಭದ್ರಡಿ ಮತ್ತು ಸಮೃದ್ಧ ಸಮಾಜದ ಮುನ್ಸೂಚನೆ.

            ಮಕ್ಕಳು ಈ ಧರೆಗೆ ಬಂದ ದೇವದುತರು. ಅವರ ಮನಸ್ಸು ಯಾವುದೇ ಕಲ್ಮಶವಿಲ್ಲದ, ಸ್ವಾರ್ಥವಿಲ್ಲದ ನಿರ್ಮಲ ಆಕಾಶದಂತೆ. ಯಾವುದೇ ಕೃತಕತೆ ಇಲ್ಲದೆ ಮೂಡಿಬರುವ ಮಗುವಿನ ನಗು, ಎಂತಹ ದುಃಖದಲ್ಲೂ ಇರುವ ಮನಸ್ಸಿಗೆ ಸಾಂತ್ವನ ನೀಡುತ್ತದೆ, ನೊಂದ ಜೀವಕ್ಕೆ ಹೊಸ ಚೈತನ್ಯವನ್ನು ತುಂಬುತ್ತದೆ.

             ಹೂವು ಅರಳಿದಾಗ ಪ್ರಕೃತಿ ಹೇಗೆ ನಗುತ್ತದೆಯೋ, ಹಾಗೆಯೇ ಮಗುವಿನ ನಗುವಿನಲ್ಲಿ ಇಡೀ ವಿಶ್ವದ ಅಂದವಿದೆ ಎಂದು ಹೇಳಿದರು. ಸಂಸ್ಥೆಯ ಪ್ರಧಾನಕಾರ್ಯದರ್ಶಿ ಬಿ ಬಿ ಗಡ್ಡದ ಅವರು ಮಾತನಾಡಿ ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ಪ್ರಜೆಗಳು.

              ಅವರಿಗೆ ಬಾಲ್ಯದಲ್ಲಿ ಸಿಗುವ ಪ್ರೀತಿ, ಆರೈಕೆ, ಸುರಕ್ಷತೆ ಮತ್ತು ಶಿಕ್ಷಣ ಅವರ ಮುಂದಿನ ಬದುಕನ್ನು ರೂಪಿಸುತ್ತವೆ. ಅವರ ಮುಖದಲ್ಲಿ ಸದಾ ನಗು ನೆಲೆಸಿದರೆ, ಅವರು ಬೆಳೆದು ಬರುವ ಸಮಾಜವೂ ಕೂಡ ಆರೋಗ್ಯಕರ, ಶಾಂತಿಯುತ ಮತ್ತು ಪ್ರೀತಿಯಿಂದ ಕೂಡ ಇರುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ