ಈಶಪ್ರಭು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಬೈಲಹೊಂಗಲ 20: ತಾಲೂಕಿನ ಮಲ್ಲಮ್ಮನ ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆಯ ವೀರ ರಾಣಿ ಮಲ್ಲಮ್ಮನ ಬೆಳವಡಿಯ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಯಾದಗಿರಿಯಲ್ಲಿ ಜರುಗಿದ ರಾಜ್ಯ ಮಟ್ಟದ ಜಂಪ್ ರೋಪ್ ಸ್ಪರ್ಧೆಯ 30 ಸೆಕೆಂಡ್ ಸ್ಪೀಡ್ ರಿಲೆಯಲ್ಲಿ ಕ್ರೀಡಾಪಟುಗಳಾದ ಮಣಿಕಂಠ ದಳವಾಯಿ, ಮಂಜುನಾಥ ಪಂಚನವರ, ನಿರಂಜನ ಖಂಡೋಜಿ, ಅಭಿಷೇಕ ತಳವಾರ, ಪ್ರಕಾಶ ವಾಡೇಕರ, ಸುದೀಪ ಬಂಡಿವಡ್ಡರ, ರಾಹುಲ ಕುಂಬಾರ, ಬಾಳೇಶ ಅಬ್ಬಾಯಿ, ಫಕ್ಕೀರ್ಪ ದಳವಾಯಿ ಅತ್ಯುತ್ತಮ ಪ್ರದರ್ಶನ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಪ್ರಕಾಶ ವಾಡೇಕರ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾನೆ. ಉತ್ತಮ ಸಾಧನೆ ತೋರಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕಾರ್ಯದರ್ಶಿ ಎಮ್.ಎಮ್.ಕಾಡೇಶನವರ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಎಮ್.ಪಿ.ಉಪ್ಪಿನ ಮಾರ್ಗದರ್ಶನ ನೀಡಿದ್ದರು.