ನಾಲ್ಕು ವರ್ಷದ ಪದವಿ ಅಂತ್ಯ: ಪಟಾಕಿ ಹಚ್ಚಿ ಸಂಭ್ರಮಸಿದ ಸರಳಾದೇವಿ ಕಾಲೇಜಿನ ವಿದ್ಯಾರ್ಥಿಗಳು
ಬಳ್ಳಾರಿ 13: ಎಐಡಿಎಸ್ಓ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿಗಳ ಒಗ್ಗಟ್ಟು ಹೋರಾಟದಿಂದ ನಾಲ್ಕು ವರ್ಷದ ಪದವಿ ಅಂತ್ಯ. ಈ ಹಿನ್ನೆಲೆಯಲ್ಲಿ ನಗರದ ಸರಳಾದೇವಿ ಕಾಲೇಜಿನ ವಿದ್ಯಾರ್ಥಿಗಳಿಂದ ಪಟಾಕಿ ಹಚ್ಚಿ ಸಂಭ್ರಮಸಿ ವಿಜಯಾಚರಣೆ ಮಾಡಲಾಯಿತು.
ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಮಾತನಾಡಿ..... ಶಿಕ್ಷಣವನ್ನು ಬಡ ಮಕ್ಕಳಯಿಂದ ಕಸಿದು ಕೊಳ್ಳುವ ಹಾಗೂ ಖಾಸಗೀಕರಣ ಮಾಡುವ ಜನವಿರೋಧಿ ಎನ್.ಇ.ಪಿ-2020 ಅನ್ನು ತೀವ್ರ ವೀರೋಧಗಳ ನಡುವೆ ಜಾರಿಗೆ ತಂದಿತ್ತು ಕಳೆದ ಎರಡು ವರ್ಷಗಳ ಹಿಂದೆ ಅಧಿಕಾರದಲ್ಲಿದ್ದ ಸರ್ಕಾವು. ಆದರೆ ಎಡೆಬಿಡದೆ ವಿದ್ಯಾರ್ಥಿಗಳ ಒಗ್ಗಟ್ಟು ಹೋರಾಟದಿಂದ ಕಳೆದ ವರ್ಷ ಅಧಿಕಾರಕ್ಕೆ ಬಂದ ಕೂಡಲೇ ಎನ್.ಇ.ಪಿ ಅನ್ನು ಹಿಂಪಡೆಯತು ಸರ್ಕಾರ. ಆದರೆ ಇದರ ಭಾಗವಾಗಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಹಿಂಪಡೆಯುವುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಮತ್ತು ರಾಜ್ಯ ಶಿಕ್ಷಣ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಹೊರಟಿರುವಾಗ ಮತ್ತೆ ವಿದ್ಯಾರ್ಥಿಗಳು ಒಗ್ಗಟ್ಟುನಿಂದ ಹೋರಾಟಕ್ಕೆ ನುಗ್ಗಿದರು. ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ವಿಚಾರದಡಿಯಲ್ಲಿ ಹೋರಾಟ ನಡೆಸಲಾಯಿತು. ಇತ್ತೀಚೆಗೆ ರಾಜ್ಯ ಸರ್ಕಾರವು ಅಧಿಕೃತವಾಗಿ ಸುತ್ತಲೇ ಹೊರಡಿಸಿತು ಇನ್ನು ಮುಂದೆ ನಾಲ್ಕು ವರ್ಷಗಳ ಪದವಿ ಸಂಪೂರ್ಣವಾಗಿ ಅಂತ್ಯ ಎಂಬುದು. ಆದ್ದರಿಂದ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ವಿಚಾರವನ್ನು ಮೈಗೂಡಿಸಿಕೊಂಡು ಇಂತಹ ಯಾವುದೇ ಜನವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳು ಬಂದಾಗ ಒಗ್ಗಟ್ಟಾಗಿ ಧ್ವನಿ ಎತ್ತಿ ಹೋರಾಟಕ್ಕೆ ಮುಂದಾಗಬೇಕು, ಆವಾಗ ಮಾತ್ರ ವಿದ್ಯಾರ್ಥಿಗಳ ಹೋರಾಟಕ್ಕೆ ಐತಿಹಾಸಿಕ ಜಯ ಸಿಗುತ್ತದೆ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಎಐಡಿಎಸ್ಓ ಉಪಾಧ್ಯಕ್ಷರು ಉಮಾ, ಪ್ರಮೋದ್ ಮತ್ತು ಸದಸ್ಯರು ಜಗದೀಶ್ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.