ಇಂಡಿ

ಅಕ್ಕಮಹಾದೇವಿಯವರ ಜೀವನಾದರ್ಶಗಳನ್ನು ಅಳವಡಿಕೊಳ್ಳಿ: ಬಿರಾದಾರ

ಅಕ್ಕಮಹಾದೇವಿಯವರ ಜೀವನಾದರ್ಶಗಳನ್ನು ಅಳವಡಿಕೊಳ್ಳಿ: ಬಿರಾದಾರ

ಇಂಡಿ17:  ತಮ್ಮ ವಚನಗಳ ಮೂಲಕ ಸಮಾಜದ ತಪ್ಪು-ತಡಿಗಳನ್ನು ತಿದ್ದುವ ಮಹಾನ್ ಕಾರ್ಯ ಮಾಡಿದವರು ಅಕ್ಕಮಹಾದೇವಿಯವರು. ಅಕ್ಕಮಹಾದೇವಿಯವರ ಜಯಂತಿ ಆಚರಣೆ ಮಾಡುವುದಷ್ಟೇ ಅಲ್ಲ, ಅವರ ಜೀವನಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. 

ಅವರು ಶನಿವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿಯಲ್ಲಿ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. 

ಅಕ್ಕಮಹಾದೇವಿ ಅವರು ಲೌಕಿಕ ಜಗತ್ತನ್ನು ದಿಕ್ಕರಿಸಿ ಸಾಕ್ಷಾತ್ ಮಲ್ಲಿಕಾರ್ಜುನನ್ನು ಪತಿ ಎಂದು ಸ್ವೀಕರಿಸಿ ಕೇಶಾಂಬರಿಯಾಗಿ ಜೀವನ ಸಾಗಿಸಿದ ಅಕ್ಕ ಹಲವಾರು ಭಕ್ತರಿಗೆ ಮಾದರಿಯಾಗಿದ್ದಾರೆ ಎಂದರು. 

ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್‌.ಬಿರಾದಾರ ಮಾತನಾಡಿ, 12 ನೇ ಶತಮಾನದಲ್ಲಿಯೇ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿ, ಶರಣ ಚಳುವಳಿಯ ಪ್ರಮುಖೆಯಾಗಿ ಅಕ್ಕಮಹಾದೇವಿ ಕಾರ್ಯ ಮಾಡಿದ್ದರು. ಇಂದಿನ ಮಹಿಳೆಯರು ಅಕ್ಕಮಹಾದೇವಿಯವರ ಲೇಖನ ಮತ್ತು ವಚನಗಳನ್ನು ಓದಬೇಕು ಎಂದರು. 

ಉಮೇಶ ಬಳಬಟ್ಟಿ, ಶಿವಾನಂದ ಮಠಪತಿ, ಯಲಗೊಂಡ ಬೇವನೂರ, ಮಾಂತೇಶ ಮುಡಕೆ, ಚಂದ್ರಾಮ ಮೇಡೇದಾರ, ಸಿದ್ದಾರ್ಥ ಅರಳಿ, ಬಸು ದಶವಂತ, ಬಾಳು ಮುಳಜಿ, ಮಲ್ಲು ಹಾವಿನಾಳಮಠ, ಡಿ.ಬಿ. ಬಿರಾದಾರ, ಅಶೋಕ ಬಳಬಟ್ಟಿ, ಶ್ರೀಕಾಂತ ಗಡಗಲಿ, ಅರವಿಂದ ಪಾಟೀಲ, ಸಚಿನ ಮೇಡೇದಾರ ಸೇರಿದಂತೆ ಮತ್ತಿತರರು ಇದ್ದರು. 

ಸುದ್ದಿ ಓದಿ