ಬೈಲಹೊಂಗಲ

ಆಡಳಿತ ಮಂಡಳಿ ಸದಸ್ಯರ ಚುನಾವಣೆ: ಅವಿರೋಧವಾಗಿ ಗುರಪ್ಪ ಆಯ್ಕೆ

ಆಡಳಿತ ಮಂಡಳಿ ಸದಸ್ಯರ ಚುನಾವಣೆ: ಅವಿರೋಧವಾಗಿ ಗುರಪ್ಪ ಆಯ್ಕೆ
ಗುರಪ್ಪ ಮೆಟಗುಡ

ಲೋಕದರ್ಶನ ವರದಿ:

ಬೈಲಹೊಂಗಲ: ಪಟ್ಟಣದ ಶಕ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023 ನೇ ಸಾಲಿನ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ 12 ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿವೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ ಬಸರಿಗಿಡದ ತಿಳಿಸಿದ್ದಾರೆ.

       ಚುನಾವಣೆ ಪ್ರಕ್ರಿಯೆ ಬಳಿಕ ಮಾತನಾಡಿದ ಅವರು, 12 ಸ್ಥಾನಗಳ ಆಡಳಿತ ಮಂಡಳಿ ಸದಸ್ಯರಾಗಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಗುರಪ್ಪ ಮೆಟಗುಡ್ಡ, ಬಸವರಾಜ ಶೆಟ್ಟರ, ವಿಜಯ ಶ್ರೀಶೈಲ ಮೆಟಗುಡ್ಡ, ಮಹಾಂತೇಶ ಶಿವಸಂಗಯ್ಯನವರಮಠ, ಮೆಹಬೂಬಸುಭಾನಿ ನದಾಫ,  ಮಹಿಳಾ ಕ್ಷೇತ್ರದಿಂದ ಪ್ರೇಮಾ ಚಂದ್ರಶೇಖರ ಮೆಟಗುಡ್ಡ, ರೇಖಾ ಅಶೋಕ ಮೆಟಗುಡ್ಡ, ಹಿಂದುಳಿದ ಅ ಕ್ಷೇತ್ರದಿಂದ ಚಿದಾನಂದ ಚಿನಿವಾಲರ,   ಹಿಂದುಳಿದ ಬ ಕ್ಷೇತ್ರದಿಂದ ವಿರುಪಾಕ್ಷೀ ಜಿಗಜಿನ್ನಿ, ಪ.ಜಾ.ಯಿಂದ ಅಶೋಕ ಕಬ್ಬಲಗಿ, ಪ.ಪ. ದಿಂದ ಅಶ್ವಿನಿ ಅಶೋಕ ಬಂಡಿ, ಸಾಲೇತರ ಕ್ಷೇತ್ರದಿಂದ ವೀರಭದ್ರ ಅಶೋಕ ಮೆಟಗುಡ್ಡ ಅವಿರೋಧವಾಗಿ ಆಯ್ಕೆಯಾದರು ಎಂದು ತಿಳಿಸಿದರು. ಗುರಪ್ಪ ಮೆಟಗುಡ್ಡ ಅವರ ನೇತ್ರತ್ವದಲ್ಲಿ 12  ನಾಮಪತ್ರ ಸಲ್ಲಿಕೆಯಾಗಿದ್ದವು. 



ಸುದ್ದಿ ಓದಿ