ಬೈಲಹೊಂಗಲ

ಬೈಲಹೊಂಗಲ ಪುರಸಭೆಗೆ ಜನ್ಮಟ್ಟಿ ಅಧ್ಯಕ್ಷ ಬಡ್ಲಿ ಉಪಾಧ್ಯಕ್ಷೆ

ಬೈಲಹೊಂಗಲ ಪುರಸಭೆಗೆ ಜನ್ಮಟ್ಟಿ ಅಧ್ಯಕ್ಷ ಬಡ್ಲಿ ಉಪಾಧ್ಯಕ್ಷೆ

ಲೋಕದರ್ಶನ ವರದಿ 


ಬೈಲಹೊಂಗಲ 22: ಪಟ್ಟಣದ ಪುರಸಭೆ ನೂತನ ಅಧ್ಯಕ್ಷರಾಗಿ ಬಸವರಾಜ ಜನ್ಮಟ್ಟಿ ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಬಡ್ಲಿ ಅವಿರೋಧವಾಗಿ ಆಯ್ಕೆಯಾದರು. 

      ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ, ಚುನಾವಣಾಧಿಕಾರಿ ತಹಶೀಲ್ದಾರ ಬಸವರಾಜ ನಾಗರಾಳ ಸೋಮವಾರ ಘೋಷಿಸಿದರು. 

  ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

     ನಂತರ ಪುರಸಭೆ ಸಭಾಭವನದಲ್ಲಿ ಅಧಿಕಾರ ಸ್ವೀಕರಿಸಿ ನೂತನ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಶಾಸಕರ, ಹಿರಿಯರ ಮತ್ತು ಎಲ್ಲ  ಪುರಸಭೆ ಸದಸ್ಯರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ, ಪಕ್ಷ ಭೇದ ಮರೆತು ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ನೀಡಿ ರಾಜ್ಯದಲ್ಲಿಯೇ ಮಾದರಿ ಪುರಸಭೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು ಜನತೆ ಕೂಡ ಇದಕ್ಕೆ ಸಹಕರಿಸಬೇಕೆಂದರು. 

  ನೂತನ ಉಪಾಧ್ಯಕ್ಷೆ ಲಕ್ಷ್ಮೀ ಬಡ್ಲಿ ಮಾತನಾಡಿ, ಪುರಸಭೆಯ ಎಲ್ಲ ಸದಸ್ಯರ ವಿಶ್ವಾಸ ತೆಗೆದುಕೊಂಡು ನಗರಾಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. 

    ಶಾಸಕ ಮಹಾಂತೇಶ ಕೌಜಲಗಿ,  ಚಿತ್ರನಟ ಶಿವರಂಜನ ಬೋಳನ್ನವರ, ವಿರುಪಾಕ್ಷ ವಾಲಿ, ಪ್ರಕಾಶ ಕೊಟಬಾಗಿ, ಸಂಜೀವಗೌಡ ಪಾಟೀಲ, ಮಲ್ಲೇಶ ಹೊಸಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಅರ್ಜುನ ಕಲಕುಟಕರ, ಮುಖ್ಯಾಧಿಕಾರಿ ಕವಿರಾಜ ನಾಗನೂರ, ಹಿರಿಯ ಸದಸ್ಯರಾದ  ರಾಜಶೇಖರ ಮೂಗಿ, ಶಿವಬಸು ಕುಡಸೋಮಣ್ಣವರ, ಉಳವಪ್ಪ ಬಡ್ಡಿಮನಿ, ಜಗದೀಶ ಜಂಬಗಿ, ಸುಧೀರ ವಾಲಿ,  ಬುಡ್ಡೇಸಾಬ ಶಿರಸಂಗಿ, ವಾಣಿಶ್ರೀ ಪತ್ತಾರ, ಪ್ರೇಮಾ ಇಂಚಲ, ಉಮಾ ಹೊಸೂರ, ಹೇಮಲತಾ ಹಿರೇಮಠ, ಶಶಿಕಲಾ ಕಲ್ಲೋಳ್ಳಿ, ಅಂಜನಾ ಬೊಂಗಾಳೆ, ದಿಲ್‌ಶಾದಬೆಗಂ ನಧಾಪ, ಲತಿಪಾಬೆಗಂ ಮುಲ್ಲಾ, ಅಂಬಿಕಾ ಕೊಟಬಾಗಿ,  ಅಮಿರಬಿ ಬಾಗವಾನ, ಹಾಗೂ ಪುರಸಭೆ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಭಾಗವಹಿಸಿ ಅಭಿನಂದಿಸಿದರು. 


ಸುದ್ದಿ ಓದಿ