ವಿದ್ಯಾರ್ಥಿಗಳಲ್ಲಿನ ಅಪೌಷ್ಟಿಕತೆ ಹಾಗೂ ರಕ್ತ ಹೀನತೆ ಹೋಗಲಾಡಿಸಲು ಮೊಟ್ಟೆ ಅವಶ್ಯಕ
ಮರಿಯಮ್ಮನಹಳ್ಳಿ 25: ಸರಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ಮಾತ್ರವಿತರಣೆ ಮಾಡುತ್ತಿರುವ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆ ಹಣ್ಣುಸೆ.25ರಿಂದ ವಾರದ ಆರು ದಿನವೂ ಸಹ ಲಭ್ಯವಾಯಿತು. ಪ್ರಸ್ತುತ ಯೋಜನೆಗೆ ಅಜೀಂ ಪ್ರೇಮ್ ಜೀ ಫೌಂಡೇಷನ್ ಫಾರ್ ಡೆವಲಪ್ ಮೆಂಟ್ ಸಂಸ್ಥೆ ಸಹಭಾಗಿತ್ವ ನೀಡಿದ್ದು, ಮುಂದಿನ ಮೂರು ವರ್ಷಕ್ಕೆ ವಿತರಣೆ ವೆಚ್ಚದ ಅನುದಾನ ನೀಡಲು ಮೆಂಟ್ ಸಹ ಮಾಡಿ ಕೊಂಡಿದೆ. ವಾರದಲ್ಲಿ ವಿದ್ಯಾರ್ಥಿಗಳಿಗೆ ಎರಡು ದಿನ ಸರಕಾರ ಮೊಟ್ಟೆ ಅಥವಾ ಬಾಳೆ, ಚಿಕ್ಕಿ ವಿತರಣೆ ಮಾಡಿದರೆ ಉಳಿದ ನಾಲ್ಕು ದಿನ ಅಜೀಂ ಪ್ರೇಮಜೀ ರವರು ಸ್ವಂತ ಅನುದಾನದಲ್ಲಿ ಮಾಡಲಿದೆ. ಸೆ.25ರಂದು ಚಾಲನೆ: ವಾರದಲ್ಲಿ ಆರು ದಿನವೂ ಮೊಟ್ಟೆ, ಮೊಟ್ಟೆ ಬೇಡ ಅಂದವರಿಗೆ ಬಾಳೆ ಅಥವಾ ಶೇಂಗಾ ಚಿಕ್ಕಿ ವಿತರಣೆಯ ಯೋಜನೆಗೆ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರ್ಪಸೆ.25ರಂದು ಚಾಲನೆ ನೀಡಿದರು.
ಜಿಲ್ಲಾ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು,ಕ್ಷೇತ್ರದ ಶಾಸಕರುಗಳು ಹಾಗೂ ಶಾಲೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಸ್ಡಿಎಂಸಿಯವರ ನೇತೃತ್ವದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು.ಮೂರು ತಿಂಗಳಿಗೊಮ್ಮೆ ಸಭೆ: ಯೋಜನೆ ಸಮರ್ಕವಾಗಿ ನಡೆಯುವ ಮತ್ತು ದುರ್ಬಳಕೆಯಾಗದಂತೆ ಅಜೀಂ ಪ್ರೇಮ್ಜೀ ಸಂಸ್ಥೆ ಅನೇಕ ಹಂತದಲ್ಲಿ ಸಮಿತಿಗಳನ್ನು ರಚಿಸಿ ಕಟ್ಟೆಚ್ಚರ ವಹಿಸಲಿದೆ. ರಾಜ್ಯಮಟ್ಟದಲ್ಲಿ ಚಾಲನಾ ಮತ್ತು ಪರಾಮರ್ಶೆ ಸಮಿತಿಯನ್ನು ಸಂಸ್ಥೆ ಮತ್ತು ಸರಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ರಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಿದೆ.ವಿದ್ಯಾರ್ಥಿಗಳಲ್ಲಿನ ಅಪೌಷ್ಟಿಕತೆ ಹಾಗೂ ರಕ್ತ ಹೀನತೆ ಹೋಗಲಾಡಿಸಲು ಸರಕಾರ ವಾರದಲ್ಲಿ ಎರಡು ದಿನ ಮೊಟ್ಟೆ ಅಥವಾ ಬಾಳೆ ಹಣ್ಣು, ಶೇಂಗಾ ಚಿಕ್ಕಿ ವಿತರಣೆ ಯೋಜನೆ ಆರಂಭಿಸಿತ್ತು. ಇದಕ್ಕೆ ಬೆಂಬಲವಾಗಿ ಸದರಿ ಯೋಜನೆ ಬಲವರ್ಧನೆಗೊಳಿಸಲು, ಆಜೀಂ ಪ್ರೇಮ್ ಜೀ ಫೌಂಡೇಷನ್ ಫಾರ್ ಡೆವಲಪ್ಮೆಂಟ್ ಸಂಸ್ಥೆ, ತನ್ನ ಸ್ವಂತ ಅನುದಾನದ ನೆರವಿನೊಂದಿಗೆ ಸಹಭಾಗಿತ್ವ ನೀಡಲು ಮುಂದಾಗಿದೆ. ಯೋಜನೆಯ ಜಾರಿಗಾಗಿ ಫೌಂಡೇಷನ್ ಅಧಿಕಾರಿಗಳು ಜು.20ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ, ಆ.27ರಂದು ಸರಕಾರದೊಂದಿಗೆ 2024ರ ಸೆಪ್ಟೆಂಬರ್ ನಿಂದ 27-8-2027ರವರೆಗೆ ಯೋಜನೆ ಜಾರಿಗಾಗಿ ಒಡಂಬಡಿಕೆ ಮಾಡಿಕೊಂಡಿದೆ. ರಾಜ್ಯದ 55,64,394 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದ್ದು, ಇದಕ್ಕಾಗಿ 1591 ಕೋಟಿ ರೂ. ಅನುದಾನ ಭರಿಸಲು ಸಂಸ್ಥೆ ಸರಕಾರದೊಂದಿಗೆ ಗ್ರಾಂಟ್ ಆಗ್ರಿಮೆಂಟ್ ಮಾಡಿಕೊಂಡಿದೆ.ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿಯೂ ಸಮಿತಿ ರಚಿಸಿ ಪ್ರಗತಿ ಪರೀಶೀಲನೆ ನಡೆಸಲಿದೆ.
ಸಂಸ್ಥೆಯು ಆಡಿಟ್ ಸಮಿತಿ ರಚಿಸಿ ಪ್ರತಿ ಶಾಲೆಯ ಅನುದಾನ ಬಳಕೆ, ಖರೀದಿ, ದಾಸ್ತಾನು, ಗುಣಮಟ್ಟ ವಿತರಣೆ ಕುರಿತು ನಿರ್ವಹಿಸಿರುವ ದಾಖಲೆಗಳನ್ನು ಪರೀಶೀಲಿಸಿ ತಪಾಸಣೆ ನಡೆಸಿ ಖಾತರಿ ಪಡಿಸಿಕೊಳ್ಳಲಿದೆ. ಆಯಾ ಶಾಲೆ ಮುಖ್ಯಶಿಕ್ಷಕರು, ಎಸ್ಡಿಎಂಸಿಯ ಜಂಟಿಯಲ್ಲಿ ಪ್ರತ್ಯೇಕ ಚೈಲ್ಡ್ ಖಾತೆ ತೆರೆಯಬೇಕು. ಖಾತೆಗೆ ಅನುದಾನ ಬಿಡುಗಡೆಯಾಗುತ್ತದೆ. ಈ ಖಾತೆಗೆ ಬೇರೆ ಹಣ ಜಮಾ ಮಾಡುವಂತಿಲ್ಲ, ಪ್ರತಿ ತಿಂಗಳು ವಿದ್ಯಾರ್ಥಿಗಳ ಎತ್ತರ, ಅಳತೆ ತೂಕ ಮಾಡಿ ದಾಖಲಿಸಿ ವಾರ್ಷಿಕ ಕ್ರೋಡೀಕರಿಸಿ ದಾಖಲಿಸುವಂತೆ ಸೂಚಿಸಿದೆ.ಸರಕಾರದಿಂದ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆ ಅಥವಾ ಶೇಂಗಾ ಚಿಕ್ಕಿ ವಿತರಣೆ ಯೋಜನೆ ಜಾರಿಯಲ್ಲಿದೆ. ಇದರೊಂದಿಗೆ ಉಳಿದ ನಾಲ್ಕು ದಿನವೂ ವಿತರಣೆ ಮಾಡಲು ಅಜೀಂ ಪ್ರೇಮ್ಜೀ ಫೌಂಡೇಷನ್ ಸಂಸ್ಥೆಯವರು ಯೋಜನೆಗೆ ಕೈಜೋಡಿಸಿದ್ದಾರೆ.ಬೌದ್ಧಿಕ ವಿಕಾಸಕ್ಕೆ ಪ್ರೋತ್ಸಾಹ:-ನಿರಂತರ ಕಲಿಕೆ ಮತ್ತು ಬೌದ್ಧಿಕ ವಿಕಾಸಕ್ಕೆ ಪ್ರೋತ್ಸಾಹ ನೀಡುವುದು, ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ ವೃದ್ಧಿಸುವುದು, ಸಮಗ್ರ ದೈಹಿಕ ಆರೋಗ್ಯ ಮತ್ತು ಬೆಳವಣಿಗೆ ಉತ್ತಮಗೊಳಿಸಿ ಅಭಿವೃದ್ಧಿಪಡಿಸಿವುದು, ಅಪೌಷ್ಟಿಕತೆ ಹಾಗೂ ರಕ್ತಹೀನತೆ ನಿವಾರಿಸುವುದು ದಿನವೂ ಮೊಟ್ಟೆ ವಿತರಣೆಯ ಮುಖ್ಯ ಉದ್ದೇಶವಾಗಿದೆ. ಒಂದು ಮೊಟ್ಟೆಗಾಗಿ ಆರು ರೂ. ನೀಡುತ್ತಿದ್ದು, ಮೊಟ್ಟೆದರ ಪರಿಷ್ಕರಣೆಯಾದರೆ ಅದರ ದರದಂತೆ ಆರ್ಥಿಕ ನೆರವನ್ನು ಒದಗಿಸಲು ಎಪಿಎಫ್ ನಿರ್ಧರಿಸಿದೆ.ಕೋಟ್"ಸರಕಾರದಿಂದ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆ ಅಥವಾ ಶೇಂಗಾ ಚಿಕ್ಕಿ ವಿತರಣೆ ಯೋಜನೆ ಜಾರಿಯಲ್ಲಿದೆ. ಇದರೊಂದಿಗೆ ಉಳಿದ ನಾಲ್ಕು ದಿನವೂ ವಿತರಣೆ ಮಾಡಲು ಅಜೀಂ ಪ್ರೇಮ್ಜೀ ಫೌಂಡೇಷನ್ ಸಂಸ್ಥೆಯವರು ಯೋಜನೆಗೆ ಕೈಜೋಡಿಸಿದ್ದಾರೆ.ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ ಚಾಲನೆ ನೀಡಲಾಗಿದೆ":-ಶೇಖರ್ಪ ಎಂ.ಹೊರಪೇಟೆ ಜಿಲ್ಲಾ ಶಿಕ್ಷಣಾಧಿಕಾರಿ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಜಿಪಂ, ವಿಜಯನಗರ ಸಾಂದರ್ಭಿಕ ಚಿತ್ರಗಳು