ಅಥಣಿ

ಜಾಗೃತಿ ಮೂಡಿಸಿ ಶತ ಪ್ರತಿಶತ ಮತದಾನಕ್ಕೆ ಪ್ರಯತ್ನ: ಅಚ್ಯುತ್

ಜಾಗೃತಿ ಮೂಡಿಸಿ ಶತ ಪ್ರತಿಶತ ಮತದಾನಕ್ಕೆ ಪ್ರಯತ್ನ: ಅಚ್ಯುತ್

ಲೋಕದರ್ಶನ ವರದಿ

ಸಂಬರಗಿ 29: 2023 ವಿಧಾನ ಸಭೆ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮತ ಹೆಚ್ಚಾಗಲು ಸಂತರ ಭಜನೆ ಮೂಲಕ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಿ ನೂರಕ್ಕೆ ನೂರರಷ್ಟು ಮತದಾನ ಮಾಡಲು ಪಯತ್ನಿಸುತ್ತಿದ್ದೇವೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಚ್ಯುತ್ ಕುಲಕರ್ಣಿ ವಿಶ್ವಾಸ ವ್ಯತ್ತಪಡಿಸಿದರು.

ಜಕ್ಕಾರಟ್ಟಿ ಹಾಗೂ ವಿಷ್ಣುವಾಡಿ ಗ್ರಾಮದಲ್ಲಿ ಸಂತರ ಬಜನೆ ಮೂಲಕ ಪ್ರತಿ ಬಡಾವಣೆಯಲ್ಲಿ ಜಾಗೃತಿ ಮೂಡಿಸಿ ಮಾತನಾಡಿ ಅವರು ಗ್ರಾಮದಲ್ಲಿ ವಿವಿದ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಿದ್ದೇವೆ. ಗ್ರಾಮದಲ್ಲಿ ಒಟ್ಟು 2221 ಮತದಾರರಿದ್ದು  ಇಲ್ಲಾ ಮತದಾರರಿಗೆ ಮತ ಹಾಕುವಂತೆ ವಿನಂತಿ ಮಾಡುತ್ತೇವೆ ಎಂದು ತಿಳಿಸಿದರು.

ಈ ವೇಳೆ ರಾಜು ಪಾಟೀಲ, ಅಪ್ಪಾಸಾಬ ಪಾಟೀಲ, ಗೊಪಾಲ ಶಿಂದೆ ಅನೇಕರು ಉಪಸ್ಥಿತರಿದ್ದರು.

ಜಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇಲ್ಲಾ ಬಿ.ಎಲ್.ಒ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಭೆ ನಡೆಸಿ ಗ್ರಾಮ ಪಂ ಅಭಿವೃದ್ಧಿ ಅಧಿಕಾರಿ ಸೂಚನೆ ನೀಡಿ ಮಾತನಾಡಿ ಅವರು ಪ್ರತಿ ಬೂತ ಮುಂದೆ ಧ್ವಾಜಾರೋರಣ ನೇರೆವೆರಿಸಿ ಮತದಾರರನ್ನು ಜಾಗೃತಿಗಳಿಸಬೇಕು ತಮ್ಮ ಗ್ರಾಮದಲ್ಲಿ ಕಡಾಯವಾಗಿ ಮತದಾರರ ಮನೆಗೆ ತೆರಳಿ ಅವರನ್ನು ಜಾಗೃತಿ ಮೂಡಿಸಬೇಕು ಎಂದು ಹೇಳಿದರು

ಈ ವೇಳೆ ಗ್ರಾಮ ಆಡಳಿತಾಧಿಕಾರಿ ಮುತ್ತಪ್ಪಾ ಪೂಜಾರಿ, ಸುಭಾಷ ನಾಗನ್ನವರ, ವಿಠ್ಠಲ ತನ್ನುರೆ, ಅನೇಕರು ಉಪಸ್ಥಿತರಿದ್ದರು. 



ಸುದ್ದಿ ಓದಿ