ಅಲ್ಪಸಂಖ್ಯಾತ ಖಾತೆ ಪರಿಣಾಮಕಾರಿಯಾಗಿ ಸದ್ಬಳಕೆ: ಶಾಸಕ ಶ್ರೀಮಂತ
ವೆಂಕಟೇಶ ದೇಶಪಾಂಡೆ
ಅಥಣಿ 17: ನಾನು ಅಲ್ಪಸಂಖ್ಯಾತ ಸಚಿವನಿದ್ದ ಅವಧಿಯಲ್ಲಿ ಜೈನ ಅಲ್ಪ ಸಂಖ್ಯಾತ ಸಮುದಾಯದ ಜಿನ ಮಂದಿರಗಳ ಅಭಿವೃದ್ಧಿಗೆ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ಅನುದಾನ ನೀಡಿದ್ದೇನೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಗುಂಡೇವಾಡಿ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಸಮುದಾಯ ಭವನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರ್ಪನವರ ಅಧಿಕಾರವಧಿಯಲ್ಲಿ ನಾನು ಕೇವಲ ಒಂದೂವರೆ ವರ್ಷ ಅಲ್ಪ ಸಂಖ್ಯಾತ ಇಲಾಖೆಯ ಸಚಿವನಾಗಿ ಕಾರ್ಯನಿರ್ವಹಿಸಿದ್ದೆ ಇದಕ್ಕಿಂತ ಮೊದಲು ಈ ಖಾತೆ ತಮಗೆ ಬೇಡ ಎಂದವರೇ ಹೆಚ್ಚಿನವರು. ಆದರೆ ನಾನು ಮಾತ್ರ ಈ ಖಾತೆಯ ಮೂಲಕ ರಾಜ್ಯದ ಅಲ್ಪ ಸಂಖ್ಯಾತ ಜೈನ ಸಮುದಾಯದ ಜಿನ ಮಂದಿರದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿರುವೆ ಎಂದ ಅವರು ಕಾಗವಾಡ ಕ್ಷೇತ್ರದ ಗುಂಡೇವಾಡಿಯಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿರುವ ಜೈನ ಸಮುದಾಯ ಬಾಂಧವರು ಫೆಬ್ರುವರಿ ತಿಂಗಳಲ್ಲಿ ಆಯೋಜಿಸಿರುವ ಪಂಚ ಕಲ್ಯಾಣ ಮಹೋತ್ಸವಕ್ಕೆ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ನಾನು ಸಚಿವನಾಗಿದ್ದಾಗ ಬೈಲಹೊಂಗಲ ಶಾಸಕರು ತಮ್ಮ ಕ್ಷೇತ್ರದಲ್ಲಿ ಜಿನ ಮಂದಿರದ ಅಭಿವೃದ್ಧಿಗೆ 20 ಲಕ್ಷ ಅನುದಾನ ಕೇಳಿದ್ದರು. ಆದರೆ ನಾನು ಆ ಜಿನ ಮಂದಿರಕ್ಕೆ ಭೇಟಿ ಕೊಟ್ಟು 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೆ ಎಂದ ಅವರು ಅಲ್ಪ ಸಂಖ್ಯಾತ ಖಾತೆಯನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡಿರುವ ತೃಪ್ತ ಭಾವ ನನ್ನಲ್ಲಿದೆ ಎಂದರು.
ಜೈನ ಸಮಾಜದ ಜಿನ ಮಂದಿರಗಳಿಗೆ ಕೊಟ್ಟ ಅನುದಾನಕ್ಕೆ ಜೈನ ಸಮಾಜದ ಬಂಧುಗಳು ಕೂಡ ವಂತಿಗೆ ಕೂಡಿಸಿ ಆ ಮೂಲಕ ಜಿನ ಮಂದಿರಗಳ ಅಭಿವೃದ್ಧಿಗೊಳಿಸಿದ್ದಾರೆ ಎಂದರು.
ಜೆಪಿ ಧುರೀಣರಾದ ಶಿವಾನಂದ ಗೊಲಭಾವಿ, ಅಬಾ ಚವ್ಹಾಣ, ಈಶ್ವರ ಕುಂಬಾರೆ, ಸಂಭಾಜಿ ವೀರ, ಕಲಗೌಡ ಪಾಟೀಲ, ವಿಕಿ ಕಾಂಬಳೆ ಸೇರಿದಂತೆ ಜೈನ ಸಮುದಾಯದ ಪದ್ಮಣ್ಣಾ ಬಣಜವಾಡ, ಮಹಾಬಲ ಭೋಸಗೆ, ರಾಜಗೊಂಡ ಕುಪವಾಡ, ರಾವಸಾಹೇಬ ಬಣಜವಾಡ, ಕಲ್ಪಪ್ಪ ದಾನೋಳಿ, ಪಾಪಾಚಂದ ಬಣಜವಾಡ, ಮಹಾವೀರ ದಾನೊಳ್ಳಿ, ಸುಭಾಶ ಭೋಸಗೆ, ಆದಿನಾಥ ಕುಪವಾಡ, ಸುಭಾಶ ಗೋಕಾಕ, ಅಶೋಕ ಬಣಜವಾಡ, ಅಪ್ಪಾಸಾಹೇಬ ಕುಪವಾಡ, ಸುಭಾಶ ಬಣಜವಾಡ, ಅಪ್ಪಾಸಾಹೇಬ ಗೋಕಾಕ, ಕಲ್ಲಪ್ಪಾ ಕುಪವಾಡ, ಪಾಪಾಚಂದ ಭೋಸಗೆ, ದೆವೇಂದ್ರ ದಾನೊಳಿ ಈ ಉಪಸ್ಥಿತರಿದ್ದರು.