ರಾಣೆಬೆನ್ನೂರ

ಸಮಾಜದಲ್ಲಿ ಸಮಾನತೆಗೆ ಶಿಕ್ಷಣಕವೊಂದೇ ತಾರಕ ಮಂತ್ರ

ಸಮಾಜದಲ್ಲಿ ಸಮಾನತೆಗೆ ಶಿಕ್ಷಣಕವೊಂದೇ ತಾರಕ ಮಂತ್ರ

ರಾಣೇಬೆನ್ನೂರು 14:  ಬಾಲ್ಯದ ಶಿಕ್ಷಣ, ಅನುಭವಿಸಿದ ಆನಂದ, ಜೀವನದ ಕೊನೆಯವರೆಗೂ ಇದ್ದೇ ಇರುತ್ತದೆ. ಇದನ್ನು ಎಂದಿಗೂ ನೆನಪಿನಾಳದಿಂದ  ಮರೆಯಾಗಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಪ್ರಕಾಶ್ ಕೃಷ್ಣಪ್ಪಕೋಳಿವಾಡ ಹೇಳಿದರು. ಅವರು, ಮಾಗೂಡ ರಸ್ತೆಯ ಶಕ್ತಿಧಾಮ ಸಭಾಭವನದಲ್ಲಿ," ನಮ್ಮ ಗೆಳೆಯ ನಮಗೆ ಹೆಮ್ಮೆ"  84ನೇ ಸಾಲಿನ ಗುಪ್ತಾ ಹೈಸ್ಕೂಲ್ ವಿದ್ಯಾರ್ಥಿ ಸಂಘವು ಆಯೋಜಿಸಿದ್ದ,  ಅಭಿನಂದನಾ ಸನ್ಮಾನ ಸ್ವೀಕರಿಸಿ  ಮಾತನಾಡಿದರು.

ಪ್ರಾಥಮಿಕ, ಪ್ರೌಢ  ಶಿಕ್ಷಣ ವಿದ್ಯಾರ್ಥಿಗಳ ಪಾಲಿಗೆ ಭದ್ರಬುನಾದಿ. ಆ ಹಂತದಲ್ಲಿ ಬಡವ, ಶ್ರೀಮಂತ, ಜಾತಿ, ಮತ, ಭೇದ,ಭಾವ ಇದ್ಯಾವುದು ಕಾಣಲು ಸಾಧ್ಯವಿಲ್ಲ ಎಂದ. ಅವರು ಅಂದಿನ ಭಾವೈಕ್ಯತೆಯ ಶಿಕ್ಷಣದ ಸಂದರ್ಭವನ್ನು ನೆನಪಿಸಿ  ಸಂಭ್ರಮಿಸಿದರು.     

 ಭಾರತ ದೇಶ ಬಹು ಯುವ ಸಮುದಾಯದಿಂದ ಕೂಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯ  ಪರಿಪೂರ್ಣತೆಗೆ ದೇಶದ ಯುವ ಜನಾಂಗ ತಮ್ಮ ವೈಚಾರಿಕ ಚಿಂತನೆಯೊಂದಿಗೆ ಶ್ರಮಿಸಬೇಕಾದ ಇಂದಿನ ಅಗತ್ಯವಿದೆ.ರಾಜಕೀಯ ಕ್ಷೇತ್ರ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಸಹ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬಹುದಾಗಿದೆ ತಾಲೂಕಿನ ಜನರ ಪ್ರೀತಿ, ವಿಶ್ವಾಸ,ಮತ್ತು ತಮ್ಮ ಮೇಲಿಟ್ಟಿರುವ ಅಭಿಮಾನ,  ಆಶೀರ್ವಾದದಿಂದ ಕ್ಷೇತ್ರದ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಮತದಾರರ ನಿರೀಕ್ಷೆಗೊ ಮೀರಿ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ, ಮಹಾ ಜನತೆಗೆ  ತಮ್ಮ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಶ್ರೀಮತಿ ಪೂರ್ಣಿಮಾ ಕೋಳಿವಾಡ, ಶ್ರೀನಿವಾಸ ಸಾಹುಕಾರ್, ಪ್ರಕಾಶ್ ಕೋಳಿವಾಡ ಅವರ ಅಂದಿನ  ಶಿಕ್ಷಣ ಸಹಪಾಠಿಗಳಾದ ನಾರಾಯಣ ಕೊಫರ್ಡೆ, ಗಿರೀಶ್ ಬಳ್ಳಾರಿ, ನಾಗರಾಜ ಹನುಮರೆಡ್ಡಿ, ಶಶಿಕಾಂತ್ ಮೇಹರವಾಡೆ, ಎಸ್. ಎಸ್. ರೋಣದ, ಕಾಂತೇಶ್ ಪಂಪಣ್ಣ ನಾಯ್ಕ್, ಸುಧೀರ ಕುರುವತ್ತಿ, ಎಂ.ಎನ್.ಸಣ್ಣಿoಗಣ್ಣನವರ್, ಸೇರಿದಂತೆ ಅನೇಕ ಗಣ್ಯರು, ನೂರಾರು ಸ್ನೇಹಿತರು  ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು

ಸುದ್ದಿ ಓದಿ