ಧಾರವಾಡ - ಹುಬ್ಬಳ್ಳಿ

ವಿದ್ಯೆ- ವಿನಯ ಉತ್ತಮ ವಿದ್ಯಾರ್ಥಿಯ ಲಕ್ಷಣ: ಪೃಥ್ವಿರಾಜ ಜಿ.ಪಿ

ವಿದ್ಯೆ- ವಿನಯ ಉತ್ತಮ ವಿದ್ಯಾರ್ಥಿಯ ಲಕ್ಷಣ: ಪೃಥ್ವಿರಾಜ ಜಿ.ಪಿ

ಧಾರವಾಡ 20:  ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮವನ್ನು ರೂಡಿಸಿಕೊಳ್ಳಿ. ಇವು ನಿಮಗೆ ನಿರ್ದಿಷ್ಟವಾದ ಗುರಿಯನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಉದ್ಯೊಗಾವಕಾಶಗಳು ಹೇರಳವಾಗಿವೆ. ಆದರೆ, ಕೌಶಲ್ಯದ ಕೊರತೆಯಿಂದಾಗಿ ನಿರುದ್ಯೋಗದ ಕೊರತೆ ಕಾಡುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಾಧಾರಿತ ತರಬೇತಿಯೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಅವುಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಿಕೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ವ್ಯಕ್ತಿತ್ವ ವಿಕಸನಗೊಳಿಸುತ್ತವೆ ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ  ಆಯೋಜಿಲಾಗಿದ್ದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರ್ಮಸ್ಥಳ ಗ್ರಾಮಾಭೀವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪೃಥ್ವಿರಾಜ ಜಿ.ಪಿ ಯವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯವನ್ನು ಸಹ ಬೆಳೆಸಕೊಳ್ಳಬೇಕು. ಗುರು-ಹಿರಿಯರಿಗೆ, ತಂದೆ-ತಾಯಂದಿರಿಗೆ ಗೌರವವನ್ನು ಕೊಡಬೇಕು. ಉತ್ತಮ ಆಹಾರ ಅಭ್ಯಾಸಗಲಿಂದ ಆರೋಗ್ಯವಂತ ದೇಹವನ್ನು ಬೆಳೆಸಿದಂತೆ, ಉತ್ತಮ ವಿಚಾರ ಧಾರೆಗಳಿಂದ ಜ್ಞಾನಾರ್ಜನೆ ಮಾಡಿ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಾವ ಕೆಲಸಕಾರ್ಯಗಳು ಚಿಕ್ಕ ಪ್ರಮಾಣದ್ದಲ್ಲ. ಛಲ ಮತ್ತು ಜಾಣ್ಮೆ ಇದ್ದರೆ ದೊಡ್ಡ ಪ್ರಮಾಣದ ಲಾಭವನ್ನು ಪಡೆಯಬಹುದು. ನಿಮ್ಮ ಗುಣ, ಸಚ್ಚಾರಿತ್ರ್ಯ ಮತ್ತು ಉತ್ತಮ ವರ್ತನೆ ಜನರನ್ನು ಆಕರ್ಷಿಸಿ, ನಿಮಗೆ ಜಯವ ತಂದು ಕೊಡಬಲ್ಲವು. ಸ್ಪರ್ಧೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಗೆದ್ದಾಗ ಜಯದ ಅಮಲಿನಲ್ಲಿ ಮೈಮರೆಯದೇ ಹೆಚ್ಚಿನದನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ, ಸೋತಾಗ ನಮ್ಮಲ್ಲಿರುವ ನೂನ್ಯತೆಗಳನ್ನು ಪರಪಡಿಸಕೊಂಡು ಗೆಲುವಿಗಾಗಿ ಹಂಬಲಿಸಿ ಎಂದು ಕೆಲವು ನಿದರ್ಶನಗಳ ಮೂಲಕ ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಹಾವೀರ ಉಪಾದ್ಯೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪಾಲಿಗೆ ಐ.ಟಿ.ಐ ತರಬೇತಿ ರಾಮಭಾಣವಾಗಿದೆ. ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಎಲ್ಲ ಸ್ತರದ ಜನರು ಶಿಕ್ಷಿತರಾಗಬೇಕು, ಗ್ರಾಮೀಣ ಭಾಗದ ಮಕ್ಕಳಿಗೆ ನೈತಿಕ ಹಾಗೂ ತಾಂತ್ರಿಕ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಧಾರವಾಡದಲ್ಲಿ ಜೆ.ಎಸ್‌.ಎಸ್ ಮತ್ತು ಎಸ್‌.ಡಿ.ಎಂ ಅಡಿಯಲ್ಲಿ ಮೂರು ಐ.ಟಿ.ಐ ಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತರಬೇತಿಯೊಂದಿಗೆ ಉದ್ಯೋಗದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು. ವೇದಿಕೆಯ ಮೇಲೆ ಬಿ. ಎ ತಡಕೊಡ ಉಪಸ್ಥಿತರಿದ್ದರು. ವಿನಾಯಕ ಗವಳಿ ಸ್ವಾಗತಿಸಿದರು. ಮಂಜುನಾಥ ಚಟ್ಟೇರ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾ ಹಿರೇಮಠ ವಂದಿಸಿದರು. 


ಸುದ್ದಿ ಓದಿ