ಬೈಲಹೊಂಗಲ

ಡಾ. ಪ್ರಭಾಕರ ಕೋರೆ 75ನೇ ಜನ್ಮದಿನ: ಪೂರ್ವಭಾವಿ ಸಭೆ

ಡಾ. ಪ್ರಭಾಕರ ಕೋರೆ 75ನೇ ಜನ್ಮದಿನ: ಪೂರ್ವಭಾವಿ ಸಭೆ

ಲೋಕದರ್ಶನ ವರದಿ 

ಬೈಲಹೊಂಗಲ 07: ಕೆ.ಎಲ್‌.ಇ. ಸಂಸ್ಥೆಯ ಚೇರಮನ್ನ ಡಾ. ಪ್ರಭಾಕರ ಕೋರೆಯವರ 75ನೇ ಜನ್ಮದಿನದ ನಿಮಿತ್ಯ ಅಕ್ಟೋಬರ್ 15ರಂದು ಮಧ್ಯಾಹ್ನ 2 ಗಂಟೆಗೆ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಕಿತ್ತೂರ ರಾಣಿ ಚನ್ನಮ್ಮ  ಅರ್ಬನ್ ಸೌಹಾರ್ದ ಸಹಕಾರಿಯ ಪ್ರಧಾನ ಕಚೇರಿಯಲ್ಲಿ ಜರುಗಿತು.  

   ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆ.ಎಲ್‌.ಇ. ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ, ಕಾರ್ಯಕ್ರಮದ ಉದ್ಘಾಟಕರಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ  ಪ್ರಹ್ಲಾದ ಜೋಶಿ, ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌. ಯಡಿಯೂರ​‍್ಪ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಮುಖ್ಯಮಂತ್ರಿ ಪ್ರಮೋದಕುಮಾರ ಸಾವಂತ, ಮಹಾರಾಷ್ಟ್ರ  ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಮಾಜಿ ಸಚಿವರು ಹಾಗೂ ಅಖಿಲ ಭಾರತೀಯ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರ​‍್ಪ, ಕಾಂಗ್ರೇಸ ಮುಖಂಡ ಆರ್‌.ವಿ. ದೇಶಪಾಂಡೆ ಭಾಗವಹಿಸಲಿದ್ದಾರೆ ಎಂದರು. 

     ಕೆ.ಎಲ್‌.ಇ. ಸಂಸ್ಥೆಯ ಉಪಾದ್ಯಕ್ಷ ಬಸವರಾಜ ತಟವಟಿ, ಕಾಡಾ ಅಧ್ಯಕ್ಷರು ಹಾಗೂ ಕೆ.ಎಲ್‌.ಇ. ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಈ ಪಾಟೀಲ, ಕೆ.ಎಲ್‌.ಇ. ಸಂಸ್ಥೆಯ ನಿರ್ದೇಶಕರಾದ ಡಾ. ವ್ಹಿ. ಎಸ್‌. ಸಾಧುನವರ, ಎಸ್‌.ಸಿ. ಮೆಟಗುಡ್ಡ, ಮುಖಂಡರಾದ ಬಸವರಾಜ ಕೌಜಲಗಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ  ಉಪಸ್ಥಿತರಿದ್ದರು. 


ಸುದ್ದಿ ಓದಿ