ಸಿಂಧಗಿ

ಕಾಂಗ್ರೆಸ್ ಜೆಡಿಎಸ್‍ನವರಿಗೆ ಭಯ ಇದ್ರೆ ಮುಸ್ಲಿಮರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಲಿ

ಕಾಂಗ್ರೆಸ್ ಜೆಡಿಎಸ್‍ನವರಿಗೆ ಭಯ ಇದ್ರೆ ಮುಸ್ಲಿಮರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಲಿ
ಪಟ್ಟಣದ ಮಹಮ್ಮದಿಯಾ ಶಾದಿ ಮಹಲ ಹಾಲನಲ್ಲಿ ನಡೆದ ಮುಸ್ಲಿಮರ ಐಕ್ಯತಾ ಸಭೆಯಲ್ಲಿ ಮುಖಂಡರು ಮಾತನಾಡಿದರು.

ಸಿಂದಗಿ 18: ಮುಸ್ಲಿಮರಿಗೆ ಬಿಜೆಪಿಯ ಭಯ ತೋರಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮುಸ್ಲಿಮರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಹುನ್ನಾರು ನಡೆಸಿವೆ  ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಕಾಂಗ್ರೆಸ್ ಜೆಡಿಎಸ್‍ನವರಿಗೆ ಭಯ ಇದ್ರೆ ಮುಸ್ಲಿಮರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಲಿ ಎಂದು ಡಾ. ದಸ್ತಗೀರ ಮುಲ್ಲಾ ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣದ ಮಹಮ್ಮದಿಯಾ ಶಾದಿ ಮಹಲ ಹಾಲನಲ್ಲಿ ನಡೆದ ಮುಸ್ಲಿಮರ ಐಕ್ಯತಾ ಸಭೆಯಲ್ಲಿ ಮಾತನಾಡಿದರು. 

ಮುಸ್ಲಿಮ ಮತಗಳು ಹೆಚ್ಚು ಇರುವ ಈ ಮತ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಯಾವದೇ ಮಾನ್ಯತೆ ಇಲ್ಲ, ಅಲ್ಪ ಸಂಖ್ಯಾತರು ಅಂದರೆ 10 ಸಾವಿರ ಮತಗಳು ಇರೋ ಸಮುದಾಯ ಬಹುಸಂಖ್ಯಾತ ಮತಗಳ ಇರುವ ಮುಸ್ಲಿಮರ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಂದು ಲಕ್ಷ ಐವತ್ತು ಸಾವಿರ ಹಿಂದುಳಿದವರ ಮತಗಳಿದ್ದು ಹಿಂದುಳಿದ ಸಮುದಾಯಗಳಿಗೆ ಅಧಿಕಾರ ದಿಂದ ದೂರ ಇಡುವ ಕುತಂತ್ರ ನಡೆದಿದೆ.ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸಿಕೊಂಡು ಮುಸ್ಲಿಂ ವಿರೋಧಿ ಹಾಗೂ ಹಿಂದುಳಿದ ದಲಿತ ವಿರೋಧಿ ಕಾನೂನುಗಳು ಜಾರಿಯಾದಾಗ ಜ್ಯಾತ್ಯಾತೀತ ಎಂದು ಹೇಳುವ ಚುನಾಯಿತ ಪ್ರತಿನಿಧಿಗಳು ಯಾವದೇ ಹೇಳಿಕೆಯನ್ನು ಕೊಡದೇ ಇರುವದು ನೋಡಿದರೆ ಈಗ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುವರು, ಈ ಬಾರಿ ಶತಾಯಗತಾಯ ಮುಸ್ಲಿಮ ಅಭ್ಯರ್ಥಿಯನ್ನು ಕಣಕ್ಕಿಳಿಸುವದು ಖಚಿತ ಎಂದರು.

ಯಾಕುಬ ನಾಟಿಕಾರ ಮಾತನಾಡುತ್ತಾ 30-40 ವರ್ಷಗಳಿಂದ ರಾಜಕೀಯ ಪಕ್ಷಗಳು ಮುಸ್ಲಿಂರ ಮತಗಳನ್ನು ಪಡೆದು ಗೆದ್ದ ನಂತರ ನಮ್ಮನ್ನು ಕಡೆಗಣಿಸುತ್ತಿವೆ ಕಾರಣ ನಾವು ಪರಿವರ್ತನೆ ಪ್ರಾರಂಭಿಸಿದ್ದೇವೆ ಬದಲಾವಣೆ ಆಗುವರಿಗೂ ನಾವು ಕೈ ಬಿಡಲ್ಲಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮಾಜಿ ಪಪಂ ಅಧ್ಯಕ್ಷ ಅಯೂಬ್ ದೇವರಮನಿ, ಕಾಂಗ್ರೆಸ್ ಮುಖಂಡ ಸಾಧಿಕ್ ಸುಂಬಡ ಮಾತನಾಡಿದರು.

ಸಭೆಯಲ್ಲಿ ಮುಸ್ಲಿಂ ಹಿರಿಯ ಮುಖಂಡರಾದ ರಿಯಾಜ.ಬಿಲವಾರ, ಮೈಬೂಬ ತಾಂಬೊಳಿ, ರಫೀಕ ಕಾಣೆ, ಸೈಯದ್ ದೇವರಮನಿ, ಅಕ್ಬರ ಮುಲ್ಲಾ, ಅಬ್ದುಲ್‍ಗನಿ ದೇವರಮನಿ, ಇಮಾಮ್ ನದಾಫ, ಬಸೀರ ಮರ್ತೂರ, ಸೈಪನ್ ನಾಟಿಕಾರ, ಖಾದರ್ ಬಂಕಲಗಿ, ಮೈಬೂಬ ಸಿಂದಗಿಕರ, ಹಾಸಿಮ್ ಆಳಂದ, ರಾಜಾಕ ಮುಜಾವಾರ, ಆಸ್ಪಾಕ ಕರ್ಜಗಿ, ಮೈಬೂಬ್ ಆಳಂದ, ರಾಜತ್ ತಾಂಬೆ, ಫೈಜಾನ, ಸಲಿಮ್ ಜುಮನಾಳ, ಜಿಲಾನಿ ನಾಟೀಕಾರ ಸೇರಿದಂತೆ ಸಮಾಜದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. 

ಸುದ್ದಿ ಓದಿ