ರಾಣೆಬೆನ್ನೂರ

ಪ್ರತಿಪಕ್ಷದವರ ಅಪಪ್ರಚಾರಕ್ಕೆ ಕಿವಿ ಕೊಡೋದು ಬೇಡ- ಪ್ರಕಾಶ್ ಕೋಳಿವಾಡ

ಪ್ರತಿಪಕ್ಷದವರ ಅಪಪ್ರಚಾರಕ್ಕೆ ಕಿವಿ ಕೊಡೋದು ಬೇಡ- ಪ್ರಕಾಶ್ ಕೋಳಿವಾಡ
 ರಾಣೇಬೆನ್ನೂರು12 : ಮಹಿಳಾ ಶಸಕ್ತಿಕರಣ, ದೇಶ ಸುತ್ತುವ, ಅಥವಾ ಕೋಶ ಓದುವ ನಮ್ಮ ಪೂರ್ವಜರು ನುಡಿದ ವಾಣಿಯಂತೆ ಸರ್ಕಾರ ಬಹು ದೂರ ದೃಷ್ಟಿಯ ಚಿಂತನೆ ನಡೆಸಿ ಇಂದು ಐದು ಗ್ಯಾರಂಟಿಗಳ ಪೈಕಿ ಒಂದನ್ನು ಉಚಿತ ಬಸ್ ಪ್ರಯಾಣ ಜಾರಿಗೊಳಿಸಿದೆ  ಅದನ್ನು ಸಮರ್ಪಕವಾಗಿ ಮಹಿಳಾ ಸಮುದಾಯ ಬಳಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
         ಅವರು ರವಿವಾರ ಮುಂಜಾನೆ, ನಗರದ ಬಸ್ ನಿಲ್ದಾಣದಲ್ಲಿ  ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ  ಶಕ್ತಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ನುಡಿದಂತೆ ನಡೆದಿದೆ, ಕೊಟ್ಟ ಭರವಸೆಗಳು ಈಡೇರಿಸಲು ಕಂಕಣಬದ್ಧವಾಗಿದೆ. ಐದು ಗ್ಯಾರಂಟಿಗಳಲ್ಲಿ,, ಮುಖ್ಯಮಂತ್ರಿಗಳು ಹೇಳಿದ ಅವಧಿಗೂ ಮುನ್ನವೇ ಉಚಿತ ಬಸ್ ಪ್ರಯಾಣ ಯೋಜನೆ ಯಾರಿಗೋಳಿಸಿ ನುಡಿದಂತೆ ನಡೆದಿದೆ, ಮುಂದೆ ಸಹ ನಡೆಯುತ್ತೇವೆ ಇದರಲ್ಲಿ ಯಾವುದೇ ಸಂಶಯ ಬೇಡ. ಪ್ರತಿಪಕ್ಷಗಳು ದಿನಕ್ಕೊಂದು ಅಪಪ್ರಚಾರಗಳು  ಮಾಡುತ್ತಿವೆ ಅದಕ್ಕೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ, ನಮ್ಮ ಕೆಲಸ ನಾವು ಮಾಡುತ್ತಾ ರಾಜ್ಯದ ಅಭಿವೃದ್ಧಿಗೆ ಮುಂದಾಗೋಣ ಎಂದು ಸ್ತ್ರೀ ಸಮುದಾಯಕ್ಕೆ ಕರೆ ನೀಡಿದರು.
            ಕಾಂಗ್ರೆಸ್ ಪಕ್ಷದ ಮುಖಂಡರಾದ, ರುಕ್ಮಿಣಿ ಸಾಹುಕಾರ್, ಡಾ : ಆರ್‌ಎಂ. ಕುಬೇರಪ್ಪ, ರತ್ನಾ ಪುನೀತ, ನೂರ್ ಜಹಾನ್ ನಂದ್ಯಾಲ್, ಸಣ್ಣ ತಮ್ಮಪ್ಪ ಬಾರ್ಕಿ, ಮಂಜನ ಗೌಡ ಪಾಟೀಲ್, ಪೂರ್ಣಿಮಾ ಕೋಳಿವಾಡ, ಪುಟ್ಟಪ್ಪ ಮರಿಯಮ್ಮನವರ, ಬಸನಗೌಡ ಮರದ,ಬಿ.ಬಿ.
 ನಂದ್ಯಾಲ್, ಶೇರುಖಾನ್ ಕಾಬೂಲಿ, ಶೇಖಪ್ಪ ಹೊಸಗೌಡ್ರ,ಶಶಿಧರ ಬಸೇನಾಯಕರ್, ಕೃಷ್ಣ ಮಣ್ಣಣ್ಣವರ್, ಇರ್ಫಾನ್ ದಿಡಗೊರ್, ಸೇರಿದಂತೆ ಮತ್ತಿತರ ಗಣ್ಯರು  ಮಾತನಾಡಿದರು.ಕಾರ್ಯಕ್ರಮದಲ್ಲಿ
 ಸಾವಿರಾರು ಕಾರ್ಯಕರ್ತರ ಅಭೂತಪೂರ್ವ ಉತ್ಸಾಹದ ಮಧ್ಯ ನಡೆದ ಈ ಮಹಿಳಾ ಉಚಿತ ಬಸ್ ಪ್ರಯಾಣ ಚಾಲನೆಯಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಬಸ್  ಹತ್ತಿ, ಸಂಭ್ರಮಿಸಿದರು.

ಸುದ್ದಿ ಓದಿ