ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಬೇಡ: ಪ್ರಭಾವತಿ ಎಫ್
ಬೈಲಹೊಂಗಲ 23: ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪಹಣಿ ತಿದ್ದುಪಡಿ, ಸಕಾಲ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ ಗುರುವಾರ ಉಪವಿಭಾಗಾಧಿಕಾರಿ ಎಫ. ಪ್ರಭಾವತಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಉಪವಿಭಾಗಾಧಿಕಾರಿ ಪ್ರಭಾವತಿ ಎಫ್ ಮಾತನಾಡಿ, ಸಕಾಲ ಯೋಜನೆಯಡಿ ಇಲಾಖೆಗಳು ಅರ್ಜಿ ಸ್ವೀಕರಿಸಿ ತ್ವರಿತವಾಗಿ ವಿಲೇವಾರಿ ಮಾಡಬೇಕು. ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡಬಾರದು. ಪಹಣಿ ತಿದ್ದುಪಡಿ, ಸಾಮಾಜಿಕ ಭದ್ರತಾ ಯೋಜನೆಗಳ ಸಾರ್ವಜನಿಕರಿಗೆ ಸೂಕ್ತ ಸಮಯದಲ್ಲಿ ಮುಟ್ಟುವಂತಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಗ್ರೇಡ್ 2 ತಹಸೀಲ್ದಾರ ಜೆ.ಸಿ.ಅಷ್ಟಗಿಮಠ, ಶೀರಸ್ತೆದಾರರಾದ ಎಸ್.ಎಂ.ಗೌಡರ, ಎಸ್.ಎಂ.ತುರಮರಿ, ಪಿ.ವೈ.ಕೋರಿ, ಉಪತಹಸೀಲ್ದಾರ ಡಿ.ಎಸ್.ಹುಬ್ಬಳ್ಳಿ, ಕಂದಾಯ ನೀರೀಕ್ಷಕರಾದ ಬಿ.ಬಿ.ಬೋರಗಲ, ಸುರೇಶ ಮಾಳಗಿ ಹಾಗೂ ತಾಲೂಕಿನ ಎಲ್ಲ ಗ್ರಾಮಲೆಕ್ಕಾಧಿಕಾರಿಗಳು ಇದ್ದರು.