ಬೈಲಹೊಂಗಲ

ದೊಡವಾಡ ಸಂಗಮೇಶ್ವರ ಪಿಕೆಪಿಎಸ್ ವಾರ್ಷಿಕ ಸಭೆ

ದೊಡವಾಡ ಸಂಗಮೇಶ್ವರ ಪಿಕೆಪಿಎಸ್ ವಾರ್ಷಿಕ ಸಭೆ

ಬೈಲಹೊಂಗಲ 20: ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2022-23ನೇ ಸಾಲಿನಲ್ಲಿ ಒಟ್ಟು 46 ಲಕ್ಷ 70 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ ಎಂದು ನಿರ್ದೇಶಕ ನಿಂಗಪ್ಪ ಚೌಡಣ್ಣವರ ಹೇಳೀದರು.  

ಅವರು ಮಂಗಳವಾರ ತಾಲೂಕಿನ ದೊಡವಾಡ ಗ್ರಾಮದಲ್ಲಿ ಸಂಗಮೇಶ್ವರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ದೊಡವಾಡ ಹಾಗೂ ನನಗುಂಡಿಕೊಪ್ಪ ಗ್ರಾಮದ ಎಲ್ಲ ರೈತರ ಮತ್ತು ಸಹಕಾರಿ ಸದಸ್ಯರ ಉತ್ತಮ ಸಹಕಾರ ಮತ್ತು ಮಾರ್ಗದರ್ಶನದಿಂದ ಸಂಸ್ಥೆ ಗಮನ ಸೆಳೆಯುವಂತ ಅಭಿವೃದ್ಧಿ ಸಾಧಿಸಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 46 ಲಕ್ಷ 70 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ಶೇ.11 ರಷ್ಟು ಲಾಭಾಂಶವನ್ನು ಶೇರುದಾರ ರೈತರಿಗೆ ವಿತರಿಸಲಾಗಿದೆ ಎಂದರು. 

ಅಧ್ಯಕ್ಷ ವೀರೇಂದ್ರ ಸಂಗೊಳ್ಳಿ ಮಾತನಾಡಿ, ರೈತರಿಗೆ ಗರಿಷ್ಠ ಮಟ್ಟದ ಬೆಳೆಸಾಲ, ಟ್ರ್ಯಾಕ್ಟರ್ ಸಾಲ, ಇನ್ನಿತರ ಸಾಲ ಯೋಜನೆ, ರಿಯಾಯಿತಿ ದರದಲ್ಲಿ ರಸಗೊಬ್ಬರ, ಕ್ರಿಮಿನಾಶಕ ಹಾಗೂ ಬಿತ್ತನೆ ಬೀಜ ಮಾರಾಟ, ಆಹಾರ ಧಾನ್ಯ ವಿತರಣೆ, ಎಮ್‌ಎಸ್‌ಪಿಯಲ್ಲಿ ಕಡಲೆ ಮತ್ತು ಹೆಸರು ಕಾಳು ಖರೀದಿ ಕೇಂದ್ರಗಳನ್ನು ಹೊಂದಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಹಕಾರಿ ಸಂಘ ಎಂದು ಗುರುತಿಸಿಕೊಂಡಿದೆ ಎಂದರು.  

ರೈತರ ಪರವಾಗಿ ಮಲ್ಲಪ್ಪ ಯರಿಕಿತ್ತೂರ, ವಿರುಪಾಕ್ಷಪ್ಪ ಸಂಗೊಳ್ಳಿ ಸಲಹೆ ಸೂಚನೆ ನೀಡಿದರು. ಸಿಬ್ಬಂದಿ ಅನಂತ ಗಾಡನ್ನವರ, ಹನಮಂತ ಸಪ್ಪಡ್ಲಿ ವಾರ್ಷೀಕ ಅಡಾವೆ ಪತ್ರಿಕೆ ಓದಿದರು. ಉಪಾಧ್ಯಕ್ಷ ಬಸವರಾಜ ಮುರಗೋಡ, ನಿರ್ದೇಶಕರಾದ ನಾಗಪ್ಪ ಸವದತ್ತಿ, ಯಲ್ಲಪ್ಪ ಹಿರಗಣ್ಣವರ, ವಿಠ್ಠಲ ಗಾಬಿ, ಚನ್ನಯ್ಯ ದಾಭಿಮಠ, ಈಶ್ವರ ಅಂದಾನಶೆಟ್ಟಿ, ಉದಯ ಕೊಟಬಾಗಿ, ಮಡಿವಾಳಪ್ಪ ವಿಭೂತಿ, ಲಕ್ಕಪ್ಪ ಅಲಕ್ಕನವರ, ಶೋಭಾ ಕಂಚಿನಮಠ, ಶಂಕ್ರೆವ್ವ ಚೌಡನ್ನವರ ಉಪಸ್ಥಿತರಿದ್ದರು.  

ಸಿಇಓ ಎಮ್‌.ಎಸ್‌.ಶಿಂಧೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ