ಅಥಣಿ

ಲಕ್ಷ್ಮಣ ಸವದಿಯವರಿಂದ ಇಲೆಕ್ಟ್ರಿಲ್ ಗಾಲಿ ಕುರ್ಚಿ ವಿತರಣೆ

ಲಕ್ಷ್ಮಣ ಸವದಿಯವರಿಂದ ಇಲೆಕ್ಟ್ರಿಲ್ ಗಾಲಿ ಕುರ್ಚಿ ವಿತರಣೆ
-ಅಂಗವಿಕಲ ಗಣಮಂತ ಕುರುಬರನಿಗೆ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಗಾಲಿ ಕುಚರ್ಿ ವಿತರಿಸಿದರು.

ಅಥಣಿ 27: ಮರ ಏರಿ ಕುರಿಗಳಿಗೆ ಎಲೆ ತಿನ್ನಿಸುವ ಸಂದರ್ಭದಲ್ಲಿ ಮರದಿಂದ ಕೆಳಗೆ ಬಿದ್ದ ಪರಿಣಾಮ ಪೆನಲ್ ಕೊಡ್ ಮುರಿದು ಶಾಶ್ವತ ಅಂಗವಿಕಲನಾಗಿದ್ದ ತಾಲೂಕಿನ ಬಳ್ಳಿಗೇರಿ ಗ್ರಾಮದ ಹನುಮಂತ ಕುರುಬರನ ದುಃಸ್ಥಿತಿಯ ವಿಷಯ ತಿಳಿದ ತಕ್ಷಣ ಆತನ ಸಹಾಯಕ್ಕೆ ಧಾವಿಸಿದ ಮಾಜಿ ಡಿಸಿಎಮ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಚೆನೈದಿಂದ ಆಧುನಿಕ ತಂತ್ರಜ್ಞಾನದ ಇಲೆಕ್ಟ್ರಿಲ್ ಗಾಲಿ ಕುರ್ಚಿಯನ್ನು ದೀಪಾವಳಿ ಪಾಡ್ಯದ ಶುಭ ದಿನದಂದು ಆತನಿಗೆ ವಿತರಿಸಿದರು. 

ನಂತರ ಮಾತನಾಡಿದ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ, ಕೆಲ ವರ್ಷಗಳ ಹಿಂದೆ ಮರದಿಂದ ಕೆಳಗೆ ಬಿದ್ದ ಪರಿಣಾಮ ಪೆನಲ್ ಕೋಡ್‌ಗೆ ಹೊಡೆತ ಬಿದ್ದಿದ್ದರಿಂದ ಹಣಮಂತ ತನ್ನ ದೇಹದ ಸೊಂಟದ ಕೆಳಗಿನ ಭಾಗದ ಶಕ್ತಿಯನ್ನು ಕಳೆದುಕೊಂಡ. ಹೀಗಾಗಿ ಎಲ್ಲದಕ್ಕೂ ಬೇರೊಬ್ಬರನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಬಂದೊದಗಿತು ಮತ್ತು ಆರ್ಥಿಕವಾಗಿ ಸದೃಢ ಅಲ್ಲದ ಹನುಮಂತನ ಕುಟುಂಬಕ್ಕೆ ಆತನಿಗಾಗಿ ಆಧುನಿಕ ತಂತ್ರಜ್ಞಾನದ ಗಾಲಿ ಕುರ್ಚಿ ಕೊಡಿಸುವ ಸ್ಥಿತಿ ಇರಲಿಲ್ಲ. ಆತನ ವಿಷಯ ಕೆಲ ತಿಂಗಳ ಹಿಂದೆ ನನ್ನ ಗಮನಕ್ಕೆ ಬಂದಿತ್ತು ಎಂದರು.  

ಆತನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಗಾಲಿ ಕುರ್ಚಿ ಚನೈನಲ್ಲಿರುವ ವಿಷಯ ತಿಳಿದ ತಕ್ಷಣ ಸುಮಾರು ಒಂದು ಲಕ್ಷ ರೂ. ಬೆಲೆಯನ್ನು ಪಾವತಿಸಿ ಅಥಣಿಗೆ ತರಿಸಿಕೊಂಡು ದೀಪದ ಹಬ್ಬ ದೀಪಾವಳಿಯಂದು ಗಾಲಿ ಕುರ್ಚಿಯನ್ನು ಹಸ್ತಾಂತರಿಸಿ ಹನುಮಂತನ ಜೀವನದಲ್ಲೂ ಬೆಳಕು, ದೀಪಾವಳಿ ಸಂಭ್ರಮ ಪಡುವಂತೆ ಮಾಡಿದ್ದೇನೆ ಎಂದ ಅವರು ಇಂತಹ ವ್ಯಕ್ತಿಗಳಿಗೆ ನನ್ನ ಸೇವೆ ಒದಗಿಸುವ ಸಂದರ್ಭ ಕಲ್ಪಿಸಿಕೊಟ್ಟ ಭಗವಂತನಿಗೆ ಚಿರಋಣಿ ಹಾಗೂ ನನ್ನ ಮತಕ್ಷೇತ್ರದಲ್ಲಿ ಇನ್ನೂ ಇಂತಹ ವ್ಯಕ್ತಿಗಳಿದ್ದಲ್ಲಿ ಅಂತವರಿಗೂ ಸಹಾಯ ಹಸ್ತ ಚಾಚುತ್ತೇನೆ ಎಂದರು.  

ಧುರೀಣರಾದ ಚಿದಾನಂದ ಸವದಿ, ನಿಂಗಪ್ಪ ಖೋಕಲೆ, ಶಂಭು ಮಮದಾಪುರ, ಶ್ರೀಶೈಲ ನಾಯಿಕ, ಅರುಣ ಭಾಸಿಂಗಿ, ಶಿವರುದ್ರ ಘೂಳಪ್ಪನವರ, ಶಿವಾನಂದ ಶಂಕರಹಟ್ಟಿ, ಬಿ.ಕೆ.ಚನ್ನರೆಡ್ಡಿ, ಕಲ್ಲೇಶ ಮಡ್ಡಿ, ರಾಜು ಗುಡೊಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ