ಹಾವೇರಿ

ಸಾಧನ-ಸಲಕರಣೆ ವಿತರಣೆ

ಸಾಧನ-ಸಲಕರಣೆ ವಿತರಣೆ

ಲೋಕದರ್ಶನ ವರದಿ 

          ಹಾವೇರಿ 23:   ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಭಾರತ ಸರ್ಕಾರ ವತಿಯಿಂದ ಖಗಿಙ ಮತ್ತು ಂಆಋ ಯೋಜನೆಯಡಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಅಗತ್ಯ ಸಾಧನ ಸಲಕರಣೆಗಳನ್ನು  ಹಾವೇರಿ ತಾಲೂಕ ಪಂಚಾಯತ್ ಆವರಣದಲ್ಲಿ ಸೋಮವಾರ ಸಕ್ಕರೆ  ಮತ್ತು ಜವಳಿ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರ​‍್ಪ ಮಾನಪ್ಪ ಲಮಾಣಿ ಅವರು ವಿತರಣೆ ಮಾಡಿದರು.  

ಒಟ್ಟು 46 ಫಲಾನುಭವಿಗಳಿಗೆ ರೂ. 5. 94 ಲಕ್ಷ ಮೊತ್ತದ ಸಾಧನ-ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಪ್ರಾಧಿಕಾರ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಸಂಜೀವ ನೀರಲಗಿ,  ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ಆಶು ನದಾಫ್ ಹಾಗೂ ಅಲಿಂಕೋ ಸಂಸ್ಥೆಯ ಮ್ಯಾನೇಜರ್ ಶಿವಕುಮಾರ್, ಜಿಲ್ಲಾ ವಿಕಲಚೇತನರ ಸಂಘದ ಉಪಾಧ್ಯಕ್ಷರಾದ ಮೌನೇಶ್ ಬಡಿಗೇರ್, ತಾಲೂಕಿನ ಎಂ.ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ