ಸ್ಕೌಟ್ಸ್ ,ಗೈಡ್ಸ್ ಶಿಸ್ತಿನ ಪಾತ್ರ ಮಹತ್ವದ್ದಾಗಿದೆ: ಮನ್ನಿಕೇರಿ
ಬೈಲಹೊಂಗಲ29: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಧಾರವಾಡ ಆಯುಕ್ತ ಕಚೇರಿ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಅವರು ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬೆಳಗಾವಿ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಹಾಗೂ ಜ್ಞಾನತೀರ್ಥ ವಿದ್ಯಾಪೀಠ ಪ್ರಾಥಮಿಕ ಮತ್ತು ಪ್ರೌಡ ಶಾಲೆ ದೇವಲಾಪುರ ಇವರ ಸಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಶಿಕ್ಷಕರ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಹೆಚ್ಚಾಗಬೇಕು. ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ಮಕ್ಕಳಲ್ಲಿ ತುಂಬಬೇಕು. ಶಿಕ್ಷಕರು ಮಕ್ಕಳಲ್ಲಿ ಮೌಲ್ಶ ಬೆಳೆಸುವವರು. ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಕಡಿಮೆಯಾಗುತ್ತಿದ್ದು ಅದನ್ನು ಸ್ಕೌಟ್ ಮತ್ತು ಗೈಡ್ಸ್ ತುಂಬುತ್ತದೆ. ಅದನ್ನು ತುಂಬುವಲ್ಲಿ ಇಲ್ಲಿ ತರಬೇತಿ ಪಡೆದಿರುವ ಶಿಕ್ಷಕರು ಮಕ್ಕಳಿಗೆ ಕೌಶಲ್ಯಗಳನ್ನು ಹಾಗೂ ಮೌಲ್ಯಗಳನ್ನು ಪ್ರಜಾಸತ್ತಾತ್ಮಕ ಗುಣಗಳನ್ನು ಬೆಳೆಸಿ ಈ ದೇಶದ ಭವ್ಯ ನಾಗರಿಕರನ್ನಾಗಿ ಮಾಡಬೇಕು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಸಮನ್ವಯಧಿಕಾರಿ ಬಿ.ಎನ್.ಕಸಾಳೆ, ಶಾಂತಿನಾಥ ಬೆಳಗಾವಿ. ಸ್ಕೌಟ್ಸ್ ಹಾಗೂ ಗೈಡ್ಸ್ ಪ್ರಮುಖರಾದ ಖ್ಯಾತ್ಶಾಯಿನಿ, ಅತ್ತಾರ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಸಂಪನ್ಮೂಲ ಶಿಕ್ಷಕರು ಹಾಗೂ ಸಿ.ಆರ್.ಪಿ. ಸಿದ್ದು ನೇಸರಗಿ ಮತ್ತು ಮರೆನ್ನವರ, ಬಿಆರ್ಪಿ ಅಜ್ಜಪ್ಪ ಅಂಗಡಿ ಇದ್ದರು.