ಬೈಲಹೊಂಗಲ

ಡಿಜಿಟಲ್, ಜನ ಸುರಕ್ಷಾ ಆಂದೋಲನ

ಡಿಜಿಟಲ್, ಜನ ಸುರಕ್ಷಾ ಆಂದೋಲನ

ಲೋಕದರ್ಶನ ವರದಿ

ಬೈಲಹೊಂಗಲ 14: ಪ್ರತಿಯೊಬ್ಬರೂ ಬ್ಯಾಂಕಿನ ಗ್ರಾಹಕರಾಗಬೇಕು ಹಾಗೂ ಎಲ್ಲರೂ ಸ್ವತಂತ್ರವಾಗಿ ಬ್ಯಾಂಕ್ ವ್ಯವಹಾರ ನಡೆಸುವ ಕನಿಷ್ಠ ಜ್ಞಾನ ಹೊಂದಿರಬೇಕೆಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದಿಂದ ತಿಳುವಳಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆರ್ಥಿಕ ಸಮಾಲೋಚಕಿ ಗೀತಾ ಖಾನಪೇಠ ಹೇಳಿದರು.

      ತಾಲೂಕಿನ ನೇಸರಗಿ ಗ್ರಾ ಪಂ ನರೇಗಾ ಕೂಲಿ ಕಾರ್ಮಿಕರಿಗೆ ಕೆನರಾ ಬ್ಯಾಂಕ್ ಅಮೂಲ್ಯ ಆರ್ಥಿಕ  ಸಾಕ್ಷರತಾ ಕೇಂದ್ರ ಕೆವಿಜಿ ಬ್ಯಾಂಕ್ ವತಿಯಿಂದ ಬುಧವಾರ ನಡೆದ ಡಿಜಿಟಲ್, ಜನ ಸುರಕ್ಷಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

      ಬೆಳಗಾವಿ ಕೆನರಾ ಬ್ಯಾಂಕ್ ಎಲ್ಡಿ ಎಂ ಪ್ರಶಾಂತ ಕುಲಕಣರ್ಿ  ಸಾಮಾಜಿಕ ಭದ್ರತಾ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಶೈಕ್ಷಣಿಕ ಸಾಲ ಸೌಲಭ್ಯ, ಉಳಿತಾಯ ಖಾತೆಯ ಮಹತ್ವ, ನಗದು ರಹಿತ ವ್ಯವಹಾರ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ ಸೇರಿದಂತೆ ಬ್ಯಾಂಕಿನ ಇತರೆ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿದರು.

    ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ಹಾಗೂ ಮೆಟಗಳು, ಕೂಲಿ ಕಾಮರ್ಿಕರು ಇದ್ದರು 

ಸುದ್ದಿ ಓದಿ