ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ
ಇಂಡಿ: ತಾಲೂಕಿನ ಪಂಚಮಸಾಲಿ ಸಮಾಜ ಬಾಂಧವರು ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ತಾಲೂಕು ಆಡಳಿತಸೌಧ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿದರು.
ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಸಮಾಜ ಬಾಂಧವರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಪಂಚಮಸಾಲಿ ಸಮಾಜದ ಅಧ್ಯಕ್ಷ ವ್ಹಿ.ಹೆಚ್. ಬಿರಾದಾರ ಮಾತನಾಡಿ 2009 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರ್ಪನವರು ಪಂಚಮಸಾಲಿ ಜನಾಂಗವನ್ನು 3 ಬಿ ವರ್ಗಕ್ಕೆ ಸೇರಿಸಿದ್ದರು. ಪಂಚಮಸಾಲಿ ಜನಾಂಗದಲ್ಲೂ ಬಡವರಿದ್ದು ಅವರು ಶೈಕ್ಷಣಿಕವಾಗಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಪಂಚಮಸಾಲಿ ಜನಾಂಗವನ್ನು 2 ಎ ವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸಿದರು.
ಅದಲ್ಲದೆ ಕೂಡಲಸಂಗಮದ ಜಯ ಮೃತ್ಯುಂಜಯ ಶ್ರೀಗಳು ಕೂಡಲ ಸಂಗಮದಿಂದ ಬೆಂಗಳೂರ ವರೆಗೆ ಮೀಸಲಾತಿ ಆಗ್ರಹಿಸಿ 10 ಲಕ್ಷಕ್ಕಿಂತ ಹೆಚ್ಚಿನ ಜನ ಭಾಗಿಯಾಗಿ ಪಾದಯಾತ್ರೆ ಕೈಕೊಂಡಿದ್ದು ಮತ್ತು ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಕೂಡ ಮಾಡಲಾಗಿತ್ತು. ಆ ವೇಳೆ ಸರಕಾರದವರು ಸಮಯ ಕೇಳಿದ್ದರು. ಅದಲ್ಲದೆ ಅನೇಕ ದಿನಗಳಿಂದ ಶ್ರೀಗಳು ಸತತ ಪ್ರಯತ್ನ ಮಾಡುತ್ತಿದ್ದು ಅವರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಮತ್ತು ಮೀಸಲಾತಿ ನ್ಯಾಯ ಸಮ್ಮತವಾಗಿದೆ ಎಂದರು.
ಸೋಮಶೇಖರ ದೇವರ, ಮಂಜುನಾಥ ಕಾಮಗೊಂಡ, ಪ್ರಭು ಹ್ಯಾಳದ, ಅನೀಲಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಉಮೇಶ ಬಳಬಟ್ಟಿ, ವಿಜಯ ರಾಠೋಡ, ಗಣಪತಿ ಬಾಣಿಕೋಲ, ಶ್ರೀಶೈಲ ಕುಂಬಾರ, ಪಿ.ಎಸ್. ಹೊಸಮನಿ ಮತ್ತಿತರರು ಮಾತನಾಡಿ ಇಂದು ಸಾಂಕೇತಿಕ ಒಂದು ದಿನ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಬಸವರಾಜ ಪಾಟೀಲ, ಶಿವಾನಂದ ಚಾಳಿಕಾರ, ಡಿ.ಎ.ಮುಜಗೊಂಡ, ವಿನೋದ ಮುಜಗೊಂಡ, ಭೀಮರಾಯ ಮದರಖಂಡಿ, ದೇವೇಂದ್ರ ಬರಡೋಲ, ನಾಗರಾಜ ಕಣದಾಳ, ಮಲ್ಲು ಗುಂಜೆಟ್ಟಿ, ರಾಜಕುಮಾರ ಗುಂಜಟ್ಟಿ, ದತ್ತು ಬಂಡೆನವರ, ತಾರು ಚವ್ಹಾಣ, ದಶರಥ ಕೊಟೆನ್ನವರ, ಅಶೋಕ ಕರೂರ, ಅಂಬಣ್ಣ ಕವಟಗಿ ಸೇರಿದಂತೆ ಮತ್ತಿತರಿದ್ದರು.