ಭಕ್ತಿಯ ಭಾವಪರವಸೆ ತುಂಬಿದ ರಾಜ್ಯಮಟ್ಟದ ಭಜನೆ
ರಾಣೇಬೆನ್ನೂರು 13: ಕಾಕಿ ಜನ ಸೇವಾ ಸಂಸ್ಥೆ, ನಗರದ ಗಣೇಶೋತ್ಸವ ಮಂಟಪದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ ಆಯೋಜಿಸಿತ್ತು, ಮುಂಜಾನೆ ಪ್ರಾರಂಭವಾದ ಸ್ಪರ್ಧೆ ರಾತ್ರಿಯ ವರೆಗೂ ನಡೆದು, ಭಜನಾಸಕ್ತರನ್ನು ಭಕ್ತಿಯ ಮತ್ತು ಭಾವದ ಭರವಸೇ ಯತ್ತ ಕೊಂಡೊಯ್ಯುವಲ್ಲಿ ಯಶಸ್ವಿ ಕಂಡಿತು. ಸ್ಪರ್ಧೆಯಲ್ಲಿ ಪುರುಷರ ಜೊತೆ ಮಹಿಳಾ ತಂಡಗಳು ಸಹ ಪಾಲ್ಗೊಂಡಿದ್ದವು.
ಶಿರಸಿ, ಉಚ್ಚಂಗಿದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಗೊಣ್ಣಾಗರ, ಹರಪನಹಳ್ಳಿ, ಬಳ್ಳಾರಿ, ಹಾವೇರಿ, ಬ್ಯಾಡಗಿ, ಸವಣೂರು, ಅರಟಾಳ, ಶಿಗ್ಗಾವಿ, ರಟ್ಟಿಹಳ್ಳಿ, ಹಿರೇಕೆರೂರು, ಧಾರವಾಡ, ಬೈಲಹೊಂಗಲ, ಅರಸೀಕೆರೆ, ಸೇರಿದಂತೆ ನಾಡಿನ ಮತ್ತಿತರ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಭಾರಿ ಪೈಪೋಟಿಯಲ್ಲಿ ಸ್ಪರ್ಧೆಗೆ ಮೈಯೂಡ್ಡಿದ್ದ ತಂಡಗಳು ಸ್ಪರ್ಧಾ ನಿರ್ಣಾಯಕರಿಗೆ ಸವಾಲಾಗಿತ್ತು. ಸ್ಪರ್ಧಾ ವಿಜೇತರಾದ, ರಾಮದುರ್ಗಸಾ :ಗೊಣ್ಣಾಗರ ಸರಿ ಶಬರಿದೇವಿ ಭಜನಾ ಸಂಘ ( ಪ್ರಥಮ-25000-00) ಗದಗ ಜಿಲ್ಲೆ ರೋಣ, ದುಗರ್ಾದೇವಿ ಭಜನಾ ಸಂಘ, ಹಾಗೂ ಸವದತ್ತಿ ಸಾ : ಹಳಕಟ್ಟಿ ( ದ್ವಿತೀಯ - ತಲಾ10000-00 ಸಾವಿರ ರೂ.) ರಾಮದುರ್ಗಾ ಸಾ : ಅರಬಿಂಚಿ ( ತೃತಿಯ-15000-00) ಮತ್ತು ಹುಬ್ಬಳ್ಳಿ-ಸಾ :ನೂಲ್ವಿ-( ಚತುರ್ಥ -100000-00) ನಗದು ಮೊತ್ತ, ಪಾರಿತೋಷಕ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ನಿರ್ಣಾಯಕರಾಗಿ ಕೆ.ಸಿ.ನಾಗರಜ್ಜಿ, ಗುಡ್ಡರಾಜ ಹಲಗೇರಿ, ಕೆ. ಎಸ್. ನಾಗರಾಜ್. ಎ. ಎ. ಕಿಲ್ಲದಾರ್. ಸೇವೆ ಸಲ್ಲಿಸಿದರು. ಮುಂಜಾನೆ ಶಾಸಕ ಅರುಣ್ ಕುಮಾರ್ ಪೂಜಾರ್ ಅವರು ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಚಾಲನೆ ನೀಡಿ ಶುಭ ಹಾರೈಸಿದರು. ಹಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ, ರೂಪಾ ಕಾಕಿ, ವೆಂಕಟೇಶ ಕಾಕಿ, ಮಲ್ಲಣ್ಣ ಅಂಗಡಿ, ರಾಘವೇಂದ್ರ ಕುಲಕರ್ಣಿ , ಪ್ರಭುಲಿಂಗಪ್ಪ ಹಲಗೇರಿ, ಭೀಮಣ್ಣ ಕಾಕಿ, ಪಾಂಡಪ್ಪ ಕಾಕಿ, ದೊಡ್ಡ ಹನುಮಂತಪ್ಪ ಕಾಕಿ, ಶಿವಾನಂದ ಸಾಲಗೇರಿ, ಶೋಭಾ ಹೊಸಪೇಟೆ, ಶಿವಾನಂದ ಬಾಗಾದಿ, ಸಿದ್ದಮ್ಮಕಾಕಿ, ಶಾರದಮ್ಮ ಶ್ಯಾವಿ, ಹನುಮಂತಪ್ಪ ಅಮಾಸಿ, ಚನ್ನಪ್ಪ ಕಾಕಿ, ಮಹಾದೇವಪ್ಪ ಶ್ಯಾವಿ, ಆರ್. ವಿ.ಪಾಟೀಲ್, ಪ್ರಭು ಎಳೆಹೊಳೆ, ಸೇರಿದಂತೆ ಕಾಕಿ ಜನ ಸೇವಾ ಸಂಸ್ಥೆ, ಕುರುಹಿನ ಶೆಟ್ಟಿ ಸಮಾಜ ಸೇವಾ ಸಂಘ,ಜೆಸಿ, ಜೆಸಿಐ, ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಸೌರಭ ಜಾನಪದ ಕಲಾವಿದರು,, ಸದಸ್ಯರು, ಪದಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರ.