ರಸ್ತೆ, ಚರಂಡಿ, ಮೂಲಭೂತ ಸೌಕರ್ಯಗಳಿಂದ ವಂಚಿತ : ರಾಜಕುಮಾರ .ಲ. ನಾಯ್ಕೋಡಿ
ಇಂಡಿ 27: ಪುರಸಭೆ ವ್ಯಾಪ್ತಿಯಲ್ಲಿರುವ ರೇವಪ್ಪ (ಮಡ್ಡಿ) ನಿವಾಸಿಗಳು ಪುರಸಭೆಗೆ ಎಲ್ಲ ಆಸ್ತಿ ತೆರಿಗೆ ಪಾವತಿಸುತ್ತಾರೆ. ಆದರೆ ಉತ್ತಮ ರಸ್ತೆ, ಚರಂಡಿ, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಚರಂಡಿ ನೀರು ಒಂದೇ ಕಡೆ ನಿಂತು ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಓಡಾಡಲು ತುಂಬಾ ತೊಂದರೆಯಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ದೂರು.
ಒಂದು ತಿಂಗಳ ಹಿಂದೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇನ್ನೂವವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕೂಡಲೆ ರಸ್ತೆ, ಚರಂಡಿ, ವಿದ್ಯುತ್ ಅಳವಡಿಸಬೇಕು ಇಲ್ಲದಿದ್ದರೆ ಪುರಸಭೆ ಮುಂದೆ ಹೋರಾಟ ಮಾಡಲಾಗುವುದು ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಚುನಾವಣೆಯ ಸಮಯದಲ್ಲಿ ಹೇಳುವ ಪುರಸಭೆ ಸದಸ್ಯರು ಮತ್ತು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳುವ ಪುರಸಭೆಯ ಅಧಿಕಾರಿಗಳು ಒಮ್ಮೆ ಈ ರಸ್ತೆಯ ಕಡೆಗೆ ಗಮನ ಕೊಡಿ ಎಂದು ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಸರಿಯಾದ ರಸ್ತೆಗಳಿಲ್ಲದೆ ವಾರ್ಡಿನ ಬೀದಿಗಳಲ್ಲಿಯ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಿದೆ. ಅದರಲ್ಲೂ ಮಕ್ಕಳು, ವೃದ್ಧರೂ, ಗರ್ಭಿಣಿ ಮಹಿಳೆಯರು ಆರೋಗ್ಯದಲ್ಲಿ ಏರು ಪೇರು ಸದಾ ಕಾಡುತ್ತಿದೆ. ಸಂಜೆ ಮಕ್ಕಳಿಗೆ ಟ್ಯೂಷನ್ ಗೆ ಬಿಟ್ಟು ತರಲು ಹೋದರೆ ರಸ್ತೆಯ ಕಾರಣ ಅತೀವ ಹೆದರಿಕೆಯಾಗುತ್ತದೆ. ಪುರಸಭೆಯ ಯೋಜನೆ ಅಡಿಯಲ್ಲಿ ಆಗುತ್ತಿರುವ ಎಲ್ಲಾ ಉಪಯೋಗಗಳು ಮತ್ತು ಪ್ರಯೋಜನಗಳು 07 ನೇ ವಾರ್ಡಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿಯಾಗದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ವಾರ್ಡಿನ ಮತ ನೀಡುವ ಮತದಾರರಿಂದ ಕೂಗು ಈಗಿನಿಂದಲೇ ಕೇಳಿಬರುತ್ತಿದೆ.
ಬಾಕ್ಸ್ 01:
ಇಂಡಿ ಪಟ್ಟಣದಲ್ಲಿಯೇ ದೊಡ್ಡ ವಾರ್ಡ 07ನೇ ವಾರ್ಡ ಆಗಿದ್ದು, ಈ ವಾರ್ಡಿನಲ್ಲಿ ರಸ್ತೆಗಳು, ಚರಂಡಿಗಳು, ಡ್ರೈನೇಜಗಳು, ವಿದ್ಯುತ್ತ ವ್ಯವಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತಕಡೆ ಸುಳಿಯುವುದಿರಲಿ ಸಮಸ್ಯೆ ಆಲಿಸಲು ವಾರ್ಡಿಗೆ ಬಾರದೆ ಇದ್ದುದ್ದರಿಂದ ವಾರ್ಡ ಅನಾಥವಾಗಿದೆ.
ರೂಷಾ ಬಾಗವಾನ 07ನೇ ವಾರ್ಡ ಮಹಿಳೆ.
ಬಾಕ್ಸ್ 2:
ನಾನು ಆಯ್ಕೆ ಆದಾಗಿನಿಂದಲೂ ಕೆಲಸ ಮಾಡಿದ್ದೇನೆ. ಆದರೆ 07ನೇ ವಾರ್ಡ ದೊಡ್ಡದಾದ್ದರಿಂದ ಸ್ವಲ್ಪ ವಿಳಂಬವಾಗಿದೆ. ಈಗಾಗಲೆ ಪುರಸಭೆ ಮುಖ್ಯಾಧಿಕಾರಿಗಳನ್ನು 07ನೇ ವಾರ್ಡಿನ ಕಾಮಗಾರಿಗಾಗಿ ಕೇಳಿಕೊಂಡಿದ್ದೇನೆ. ಇನ್ನುಳಿದ ಕೆಲಸ ರಸ್ತೆ, ಚರಂಡಿ, ವಿದ್ಯುತ್ ಮೂಲ ಭೂತ ಸೌಕರ್ಯಗಳು ಪುರಸಭೆ ಮುಖ್ಯಾಧಿಕಾರಿಗಳು ನಮ್ಮ ಮಾತಿ ಎಳ್ಳಷ್ಟೂ ಕಿಮ್ಮತ್ತಿಲ.್ಲ ಇತ್ತೀಚೆಗೆ ನಾವು ಎಲ್ಲ ಸದಸ್ಯರು ಪುರಸಭೆ ಮುಂದೆ ಧರಣಿ ಕೂತರು ಪ್ರಯೋಜನೆಯಾಗಿಲ್ಲ. ಸೈಪನ್ ಪವಾರ 07ನೇ ವಾರ್ಡ ಸದಸ್ಯ.